ಭಾರತ ಕ್ರಿಕೆಟ್ ತಂಡದ ನಾಯಕ ಹಿಟ್ಮ್ಯಾನ್ ರೋಹಿತ್ ಶರ್ಮ ಇಂದು ತಮ್ಮ 37ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ರೋಹಿತ್ ಶರ್ಮಾ 2007 ಜೂನ್ 23 ರಂದು ಭಾರತ ಮತ್ತು ಐರ್ಲೆಂಡ್ ನಡುವಣ ಏಕದಿನ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪ್ರವೇಶಿಸಿದರು. ವೀರೇಂದ್ರ ಸೆಹ್ವಾಗ್ ಅವರಂತೆ ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್ ಶರ್ಮ ಅವರಿಗೆ ಓಪನಿಂಗ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯುವ ಅವಕಾಶ ಸಿಕ್ಕಿತು. ಏಕದಿನ ಕ್ರಿಕೆಟ್ ನಲ್ಲಿ 262 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 10709ರನ್ ಬಾರಿಸಿದ್ದು, ಇದರಲ್ಲಿ 55 ಅರ್ಧ ಶತಕ ಮತ್ತು 31 ಶತಕಗಳಿವೆ.
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಆರು ಬಾರಿ ಟ್ರೋಫಿ ಎತ್ತಿ ಹಿಡಿದ ಕೀರ್ತಿ ರೋಹಿತ್ ಶರ್ಮ ಅವರಿಗೆ ಸಲ್ಲುತ್ತದೆ. ಈ ಬಾರಿಯ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಅವರನ್ನು ನಾಯಕ ಸ್ಥಾನದಿಂದ ತೆಗೆದು ಹಾರ್ದಿಕ್ ಪಾಂಡ್ಯ ಅವರನ್ನು ನೇಮಕ ಮಾಡಲಾಯಿತು. ಆರಂಭದಲ್ಲಿ ರೋಹಿತ್ ಶರ್ಮ ಅಭಿಮಾನಿಗಳು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಇವೆಲ್ಲವನ್ನ ಮರೆತು ಇದೀಗ ಹಾರ್ದಿಕ್ ಪಾಂಡ್ಯ ಅವರನ್ನ ಒಪ್ಪಿಕೊಂಡಿದ್ದಾರೆ. ಇಂದು ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಮುಖಾಮುಖಿಯಾಗುತ್ತಿದ್ದು, ರೋಹಿತ್ ಶರ್ಮಾ ತಮ್ಮ ಹುಟ್ಟು ಹಬ್ಬದಂದು ಅವರ ಅಭಿಮಾನಿಗಳಿಗೆ ರನ್ಸ್ ಔತಣ ನೀಡಲಿದ್ದಾರ ಕಾದು ನೋಡಬೇಕಾಗಿದೆ.