HomeBusinessಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಗಗನಕ್ಕೇರಿದ ತರಕಾರಿ ಬೆಲೆ

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಗಗನಕ್ಕೇರಿದ ತರಕಾರಿ ಬೆಲೆ

ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಕಾರಣ ತರಕಾರಿ ಬೆಲೆ ಭಾರಿ ದುಬಾರಿಯಾಗಿದೆ.

ಬೀನ್ಸ್ ದರ ಕೆಜಿಗೆ 200 ರೂಪಾಯಿ ತಲುಪಿದೆ. ಬಿಳಿ ಬದನೆಕಾಯಿ 66 ರೂ., ಬಾಟಲ್ ಬದನೆ 60 ರೂ.,  ಸೌತೆಕಾಯಿ 48 ರೂ., ನುಗ್ಗೆಕಾಯಿ 44 ರೂ., ಬೆಳ್ಳುಳ್ಳಿ 294 ರೂ., ಹಾಗಲಕಾಯಿ 59 ರೂ., ಬೆಂಡೆಕಾಯಿ 60 ರೂ. ವರೆಗೆ ಏರಿಕೆಯಾಗಿದೆ.

ಸೊಪ್ಪುಗಳ ದರ ಕೂಡ ಭಾರಿ ಏರಿಕೆಯಾಗಿದೆ ನಾಟಿ ಕೊತಂಬರಿಸೊಪ್ಪು ಕಂತೆಗೆ 25 ರೂ. ವರೆಗೆ ಮಾರಾಟವಾಗಿದೆ. ದಂಟು, ಪಾಲಕ್, ಮೆಂತೆ ಸೊಪ್ಪಿನ ದರ 20ರಿಂದ 25 ರೂ.ವರೆಗೆ ಏರಿಕೆಯಾಗಿದೆ. ತೆಂಗಿನ ಕಾಯಿ ದರ 40 ರಿಂದ 54 ರೂ. ವರೆಗೆ ಏರಿಕೆ ಕಂಡಿದೆ. ಮಧ್ಯಮ ಗಾತ್ರದ ತೆಂಗಿನ ಕಾಯಿ 33 ರೂ., ಸಣ್ಣಗಾತ್ರದ ತೆಂಗಿನಕಾಯಿ 20 ರಿಂದ 30ರವರೆಗೆ ಮಾರಾಟವಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ಯಶವಂತಪುರ ಎಪಿಎಂಸಿಯಲ್ಲಿ ಬೀನ್ಸ್ ಸಗಟು ತರ 140 ರಿಂದ 150 ರೂ.ಇದೆ. ಚಿಲ್ಲರೆ ದರ 180- 200 ರೂ. ವರೆಗೆ ಇದೆ. ಮಳೆಯ ಕೊರತೆ, ಬಿಸಿಲಿನ ತಾಪ, ಬರ, ಬಿತ್ತನೆ ಕಡಿಮೆಯಾಗಿರುವುದು, ಇಳುವರಿ ಕುಂಠಿತ, ಬೇಡಿಕೆ ಕುಸಿತ ಪರಿಣಾಮ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular