HomeKarnatakaBREAKING NEWS: ಇವಿಎಂಗಳನ್ನು ಸಾಗಿಸುತ್ತಿದ್ದ ವಾಹನದ ಟೈರ್ ಸ್ಫೋಟ

BREAKING NEWS: ಇವಿಎಂಗಳನ್ನು ಸಾಗಿಸುತ್ತಿದ್ದ ವಾಹನದ ಟೈರ್ ಸ್ಫೋಟ

ಕೋಲಾರ: ಇವಿಎಂಗಳನ್ನು ಸಾಗಿಸುತ್ತಿದ್ದ ವಾಹನದ ಟೈರ್ ಸ್ಫೋಟಗೊಂಡಿರುವ ಘಟನೆ ಕೋಲರ ಜಿಲ್ಲೆಯ ಮುಳಬಾಗಿಲು ಬಳಿ ನಡೆದಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಇವಿಎಂಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಮುಳಬಾಗಿಲಿನಿಂದ ಕೋಲಾರಕ್ಕೆ ಇವಿಎಂ ಗಳನ್ನು ಸ್ಟ್ರಾಂಗ್ ರೂಮ್ ಗೆ ಸಾಗಿಸುತ್ತಿದ್ದಾಗ ಕ್ಯಾಂಟರ್ ವಾಹನದ ಟೈರ್ ಸ್ಫೋಟಗೊಂಡಿದೆ. ರಸ್ತೆಯಲ್ಲಿಯೇ ವಾಹನ ನಿಂತಿದ್ದು, ವಾಹನದ ಟೈರ್ ಬದಲಾಯಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ವಾಹನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಾಹನದ ಬಳಿ ತಹಶೀಲ್ದಾರ್, ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular