HomeKarnatakaಮತದಾನಕ್ಕೆ ಬಂದಿದ್ದ ಮಹಿಳೆಗೆ ಹೃದಯಸ್ತಂಭನ; ಜೀವ ಉಳಿಸಿದ ಸ್ಥಳದಲ್ಲಿದ್ದ ವೈದ್ಯ

ಮತದಾನಕ್ಕೆ ಬಂದಿದ್ದ ಮಹಿಳೆಗೆ ಹೃದಯಸ್ತಂಭನ; ಜೀವ ಉಳಿಸಿದ ಸ್ಥಳದಲ್ಲಿದ್ದ ವೈದ್ಯ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದಿದ್ದು, ಬೆಂಗಳೂನಲ್ಲಿ ಮತದಾನಕ್ಕೆ ಮತಗಟ್ಟೆಗೆ ಆಗಮಿಸಿದ್ದ ಮಹಿಳೆಗೆ ಹೃದಯಸ್ತಂಭನವಾಗಿದೆ.

ಜಿ.ಪಿ.ನಗರದಲ್ಲಿರುವ ಜಂಬೂ ಸವಾರಿ ದಿನ್ನೆ ಮತಗಟ್ಟೆಗೆ ಮತದಾನ ಮಾಡಲು ಆಗಮಿಸಿದ ಮಹಿಳೆಯೊಬ್ಬರಿಗೆ ಹೃದಯಸ್ತಂಭನವಾಗಿದೆ. ಇದೇ ಮತಗಟ್ಟೆಗೆ ಮತದಾನ ಮಾಡಲು ಆಗಮಿಸಿದ್ದ ವೈದ್ಯರೊಬ್ಬರು ಮಹಿಳೆಯ ಜೀವ ಉಳಿಸಿದ್ದಾರೆ.

ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ.ಗಣೇಶ್ ಶ್ರೀನಿವಾಸ್ ಪ್ರಸಾದ್ ಜೀವ ಉಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮತಗಟ್ಟೆಗೆ ಮತದಾನಕ್ಕೆ ಬಂದಿದ್ದ 50 ವರ್ಷದ ಮಹಿಳೆಯೊಬ್ಬರು ಆಯಾಸಗೊಂಡು ನೀರು ಕುಡಿಯಲು ಬಂದಿದ್ದರು. ಈ ವೇಳೆ ಕುಸಿದು ಬಿದ್ದಿದ್ದಾರೆ. ಉಸಿರುಗಟ್ಟಿ ದೇಹದಲ್ಲಿ ಚಲನವಲನವಿರಲಿಲ್ಲ. ತಕ್ಷಣ ಸಿಪಿಆರ್ ಮಾಡಿದ ವೈದ್ಯ ಗಣೇಶ್, ಮಹಿಳೆ ಚೇತರಿಸಿಕೊಳ್ಳುವಂತೆ ಮಾಡಿದರು. ಬಳಿಕ ಮತದಾನ ಮಾಡಿದ ನಂತರ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತು.

For Latest News Updates, Join Our Whatsapp Community🚩
RELATED ARTICLES

Most Popular