ಚೆನ್ನೈ: ದೇಶದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಗೆ ಇಂದು ಮತದಾನ ಆರಂಭವಾಗಿದೆ. 102 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ತಮಿಳುನಾಡಿನ ಎಲ್ಲಾ 39 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಶಿವಗಂಗೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮತ ಚಲಾಯಿಸಿದ ನಂತರ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನನ್ನ ಮತವನ್ನು ಚಲಾಯಿಸಲು ನನಗೆ ಸಾಧ್ಯವಾಗಿದ್ದಕ್ಕಾಗಿ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆಯಿದೆ. ತಮಿಳುನಾಡಿನ ಎಲ್ಲಾ 39 ಸಂಸದೀಯ ಸ್ಥಾನಗಳನ್ನು ಮೈತ್ರಿಕೂಟ ಗೆಲ್ಲಲಿದೆ ಎಂದು ಹೇಳಿದ್ದಾರೆ.
ಸೇಲಂನಲ್ಲಿ ತಮಿಳುನಾಡು ಮಾಜಿ ಸಿಎಂ ಹಾಗೂ ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತದಾನದ ಬಳಿಕ ತಮ್ಮ ಶಾಯಿಯ ಬೆರಳನ್ನು ತೋರಿಸಿದ್ದಾರೆ.
#WATCH | Former Tamil Nadu CM and AIADMK leader Edappadi K Palaniswami casts his vote at a polling booth in Salem. #LokSabhaElections2024 pic.twitter.com/NT6zdXtFiE
— ANI (@ANI) April 19, 2024
#WATCH | After casting his vote, Congress leader P Chidambaram says, "I am very happy and proud that I have been able to cast my vote in the Lok Sabha elections. As far as Tamil Nadu is concerned, I am absolutely confident that the INDIA group will win all 39 Parliamentary seats… https://t.co/zLeo65lbQH pic.twitter.com/OzQbhsc1WZ
— ANI (@ANI) April 19, 2024

