HomeKarnatakaಸಂಬಂಧ ಮುಂದುವರೆಸಲು ನಿರಾಕರಿಸಿದ ಯುವತಿ ಹತ್ಯೆಗೈದ ಪ್ರಿಯಕರ: ತಲೆ ಮೇಲೆ ಕಲ್ಲು ಎತ್ತಿಹಾಕಿ ಪ್ರಿಯಕರನ ಕೊಂದ...

ಸಂಬಂಧ ಮುಂದುವರೆಸಲು ನಿರಾಕರಿಸಿದ ಯುವತಿ ಹತ್ಯೆಗೈದ ಪ್ರಿಯಕರ: ತಲೆ ಮೇಲೆ ಕಲ್ಲು ಎತ್ತಿಹಾಕಿ ಪ್ರಿಯಕರನ ಕೊಂದ ಯುವತಿ ತಾಯಿ

ಬೆಂಗಳೂರು: ಬೆಂಗಳೂರಿನ ಸಾರಕ್ಕಿ ಬಳಿಯ ಪಾರ್ಕ್ ನಲ್ಲಿ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಸುರೇಶ್(46), ಅನುಷಾ(25) ಇಬ್ಬರೂ ಪರಿಚಿತರಾಗಿದ್ದಾರೆ.

ಗೊರಗುಂಟೆಪಾಳ್ಯ ನಿವಾಸಿ ಸುರೇಶ ಶಾಕಾಂಬರಿ ನಗರದ ನಿವಾಸಿ ಅನುಷಾ ಅವರ ನಡುವೆ ಸಂಬಂಧವಿತ್ತು. ಸುರೇಶನಿಗೆ ಮದುವೆಯಾಗಿದ್ದರೂ ಅನುಷಾ ಸಂಬಂಧ ಹೊಂದಿದ್ದರು. ಆದರೆ, ಅನುಷಾಗೆ ಇತ್ತೀಚೆಗೆ ಸಂಬಂಧ ಮುಂದುವರೆಸುವುದು ಇಷ್ಟ ಇರಲಿಲ್ಲ.

ಬ್ರೇಕ್ ಅಪ್ ಮಾಡಿಕೊಳ್ಳಲು ನಿರ್ಧರಿಸಿದ್ದರು. ಇಂದು ಭೇಟಿಯಾಗಿ ಸಂಬಂಧ ಕಡಿತ ಮಾಡುವ ನಿರ್ಧಾರ ಕೈಗೊಂಡಿದ್ದರು. ಆದರೆ, ಅನುಷಾ ತನ್ನ ಕೈತಪ್ಪಿ ಹೋಗುತ್ತಾಳೆ ಎಂದು ಕೋಪಗೊಂಡಿದ್ದ ಸುರೇಶ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಅನುಷಾ ತಾಯಿ ಗೀತಾ ತಡೆಯಲು ಮುಂದಾಗಿದ್ದಾರೆ. ಕೊನೆಗೆ ಸಿಮೆಂಟ್ ಇಟ್ಟಿಗೆಯನ್ನು ಸುರೇಶನ ತಲೆ ಮೇಲೆ ಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಭೀರ ಗಾಯಗೊಂಡಿದ್ದ ಸುರೇಶ ಮತ್ತು ಅನುಷಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗೀತಾರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಜೆ.ಪಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular