HomeKarnatakaBIG NEWS: ಸಿ.ಎನ್. ಮಂಜುನಾಥ್ ರನ್ನು ನಾನೇ ಬಿಜೆಪಿಯಿಂದ ನಿಲ್ಲಿಸಿದ್ದೇವೆ; ಇದು ರಾಜಕೀಯ ತಂತ್ರಗಾರಿಕೆ ಎಂದ...

BIG NEWS: ಸಿ.ಎನ್. ಮಂಜುನಾಥ್ ರನ್ನು ನಾನೇ ಬಿಜೆಪಿಯಿಂದ ನಿಲ್ಲಿಸಿದ್ದೇವೆ; ಇದು ರಾಜಕೀಯ ತಂತ್ರಗಾರಿಕೆ ಎಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ. ಡಾ.ಸಿ.ಎನ್ ಮಂಜುನಾಥ್ ಅವರನ್ನು ನಾವೇ ಬಿಜೆಪಿಯಿಂದ ಸ್ಪರ್ಧಿಸುವಂತೆ ಹೇಳಿ ನಿಲ್ಲಿಸಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶಿವಮೊಗ್ಗಕ್ಕೆ ತೆರಳುವ ಮುನ್ನ ಮಾತನಡಿದ ಮಾಜಿ ಸಿಎಂ ಕುಮಾರಸ್ವಾಮಿ, ರಾಜಕೀಯ ತಂತ್ರಗಾರಿಕೆ ವರ್ಕೌಟ್ ಆಗಬೇಕು ಎಂಬ ಕಾರಣಕ್ಕೆ ನಾನೇ ಮಂಜುನಾಥ್ ರನ್ನು ಬಿಜೆಪಿಂದ ನಿಲ್ಲಿಸಿದ್ದು ಎಂದಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಅಲ್ಲಿನ ಜನರಿಗೆ ಮಂಜುನಾಥ್ ಬಗ್ಗೆ ವಿಶೇಷ ಅಭಿಮಾನವಿದೆ. ಆರೋಗ್ಯ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ. ಅಲ್ಲಿನ ಜನ ಇಂದುಗೂ ಮಂಜುನಾಥ್ ಅವರನ್ನು ನೆನಸುತ್ತಾರೆ. ಜನರಿಗೂ ಖುಷಿಯಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವೇಗೌಡರ ಬುದ್ಧಿವಂತ ಅಳಿಯ ರಾಜಕೀಯಕ್ಕೆ ಬರಬೇಕು ಎಂಬುದು ಇರಲಿಲ್ಲ. ಆದರೆ ಬುದ್ಧಿವಂತ ದೇವೇಗೂಉಡರ ಕುಟುಂಬ ರಾಜಕೀಯ ಲೆಕ್ಕಾಚರ ಮಾಡಿ ಬಿಜೆಪಿಯಿಂದ ಮಂಜುನಾಥ್ ಅವರನ್ನು ನಿಲ್ಲಿಸಿದೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular