HomeIndiaಈ ಕುಟುಂಬದಲ್ಲಿದ್ದಾರೆ ಒಟ್ಟು 1200 ಸದಸ್ಯರು, ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ 350 ಮಂದಿ !

ಈ ಕುಟುಂಬದಲ್ಲಿದ್ದಾರೆ ಒಟ್ಟು 1200 ಸದಸ್ಯರು, ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ 350 ಮಂದಿ !

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ 3 ದಿನಗಳು ಮಾತ್ರ ಬಾಕಿ ಇವೆ. ಏಪ್ರಿಲ್ 19 ರಂದು ಮತದಾರರು 102 ಸ್ಥಾನಗಳಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತ ಚಲಾಯಿಸುವ ಅಸ್ಸಾಂನ ಕುಟುಂಬವೊಂದು ಭಾರೀ ಅಚ್ಚರಿಗೆ ಕಾರಣವಾಗಿದೆ. ಈ ಕುಟುಂಬದಲ್ಲಿ 1200 ಮಂದಿ ಹಾಗೂ 350 ಮತದಾರರಿದ್ದಾರೆ.

ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ನೇಪಾಳಿ ಪಾಮ್ ಗ್ರಾಮದ ನಿವಾಸಿ ರಾನ್ ಬಹದ್ದೂರ್ ಥಾಪಾ ಅವರಿಗೆ ಸೇರಿದ ಕುಟುಂಬ ಇದು. ರಾನ್ ಬಹದ್ದೂರ್ ಥಾಪಾ ಈಗ ಬದುಕಿಲ್ಲ. ಈತ ನೇಪಾಳದಿಂದ 1964 ರಲ್ಲಿ ತಮ್ಮ ತಂದೆಯೊಂದಿಗೆ ಇಲ್ಲಿಗೆ ಬಂದು ನೆಲೆಸಿದರು. ಐದು ಬಾರಿ ಆತ ವಿವಾಹವಾದರು. ಐವರು ಹೆಂಡತಿಯರಿಗೆ ಒಟ್ಟಾರೆ 12 ಗಂಡು ಮತ್ತು 9 ಹೆಣ್ಣು ಮಕ್ಕಳಿದ್ದರು.

ಹೀಗೆ ಅವರ ಕುಟುಂಬ ದೊಡ್ಡದಾಗುತ್ತಲೇ ಹೋಯಿತು. ಥಾಪಾರ ಪುತ್ರರು ಮತ್ತು ಪುತ್ರಿಯರು 150 ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ. ಹೀಗೆ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳೆಲ್ಲ ಸೇರಿ ಈ ಕುಟುಂಬದಲ್ಲಿ 1200 ಕ್ಕೂ ಹೆಚ್ಚು ಜನರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತ ಥಾಪಾರ ಪುತ್ರ ತಿಲ್ ಬಹದ್ದೂರ್ ಥಾಪಾ ತಮ್ಮ ಕುಟುಂಬದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಕುಟುಂಬದಲ್ಲಿ ಸುಮಾರು 350 ಮಂದಿ ಮತದಾನದ ಹಕ್ಕು ಹೊಂದಿದ್ದಾರಂತೆ. ರಾನ್ ಬಹದ್ದೂರ್ ಥಾಪಾ ಅವರು 1997 ರಲ್ಲಿ ನಿಧನರಾದರು. ಮಗ ತಿಲ್ ಬಹದ್ದೂರ್ ಥಾಪಾ 1989 ರಿಂದಲೂ ಗ್ರಾಮದ ಮುಖ್ಯಸ್ಥರಾಗಿದ್ದಾರೆ. ಇವರಿಗೆ 11 ಮಕ್ಕಳಿದ್ದಾರೆ. ಅವರ ಸಹೋದರ ಸರ್ಕಿ ಬಹದ್ದೂರ್ ಥಾಪಾ ಮೂರು ಮದುವೆಯಾಗಿದ್ದು, ಅವರಿಗೆ 12 ಮಕ್ಕಳಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಲಾಭ ಇಂದಿಗೂ ತಮ್ಮ ಕುಟುಂಬಕ್ಕೆ ಸಿಗುತ್ತಿಲ್ಲ ಎಂದು ತಿಲ್ ಬಹದ್ದೂರ್ ಥಾಪಾ ಹೇಳಿದ್ದಾರೆ. ಅವರ ಮಕ್ಕಳೆಲ್ಲ ಉನ್ನತ ಶಿಕ್ಷಣ ಪಡೆದರೂ ಯಾರಿಗೂ ಸರ್ಕಾರಿ ಕೆಲಸ ಸಿಕ್ಕಿಲ್ಲ. ಹಾಗಾಗಿ ಕುಟುಂಬದ ಕೆಲವು ಸದಸ್ಯರು ಬೆಂಗಳೂರಿಗೆ ತೆರಳಿ ಖಾಸಗಿ ಉದ್ಯೋಗ ಮಾಡುತ್ತಿದ್ದಾರಂತೆ.

For Latest News Updates, Join Our Whatsapp Community🚩
RELATED ARTICLES

Most Popular