HomeKarnatakaBIG NEWS: ಐಫೋನ್ ಕೊಡಿಸಿಲ್ಲ ಎಂದು ಮನೆ ಬಿಟ್ಟು ಹೋದ ಬಾಲಕ; ಪೋಷಕರು ಕಂಗಾಲು

BIG NEWS: ಐಫೋನ್ ಕೊಡಿಸಿಲ್ಲ ಎಂದು ಮನೆ ಬಿಟ್ಟು ಹೋದ ಬಾಲಕ; ಪೋಷಕರು ಕಂಗಾಲು

ಬಾಗಲಕೋಟೆ: ಪೋಷಕರು ಐಫೋನ್ ಕೊಡಿಸಿಲ್ಲ ಎಂಬ ಕಾರಣಕ್ಕೆ ನೊಂದ 10ನೇ ತರಗತಿ ವಿದ್ಯಾರ್ಥಿ ಮನೆ ಬಿಟ್ಟು ಹೋಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ.

ಶ್ರವಣಕುಮಾರ್ ತಳವಾರ ಮನೆ ಬಿಟ್ಟು ಹೋಗಿರುವ ಬಾಲಕ. ಮನೆಯಲ್ಲಿದ್ದ 800 ರೂಪಾಯಿ ಹಣ ತೆಗೆದುಕೊಂಡು ಕಳೆದ ಶನಿವಾರ ಮನೆ ಬಿಟ್ಟು ಹೋದ ಬಾಲಕ ಇನ್ನೂ ವಾಪಾಸ್ ಆಗಿಲ್ಲ. ಪೋಷಕರು ಕಂಗಾಲಾಗಿದ್ದಾರೆ.

ಮಗ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ಬಾಲಕನಿಗಾಗಿ ಹುಡುಕಾಟ ನದೆಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular