ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ತಾರೆ; ಹೊಸ ವಿವಾದ ಸೃಷ್ಟಿಸಿದ ಗ್ರಂಥಾಲಯದ ಗೋಡೆ ಬರಹ

ಚಿಕ್ಕಬಳ್ಳಾಪುರ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಬರಹದ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನೆ ಮಾಡಿ’ ಎಂದು ತಿದ್ದಿದ್ದ ಗೋಡೆ ಬರಹ ರಾಜ್ಯಾದ್ಯಂತ ಭಾರಿ ವಿವಾದಕ್ಕೆ ಕಾರಣವಗಿತ್ತು. ಇದರ ಬೆನ್ನಲ್ಲೇ ಇದೀಗ ಗ್ರಂಥಾಲದಲ್ಲಿನ ಬರಹವೊಂದು ಹೊಸ ವಿವಾದವನ್ನು ಸೃಷ್ಟಿಸಿದೆ.

‘ಮಂದಿರ ಕಟ್ಟಿದರೆ ಸಾವಿರಾರು ಭಿಕ್ಷುಕರು ಹುಟ್ಟಿಕೊಳ್ತಾರೆ’ ಎಂಬ ಬರಹ ಗ್ರಂಥಾಲಯದ ಗೋಡೆಗೆ ಬರೆಯಲಾಗಿದ್ದು, ಹಿಂದೂ ಸಂಘಟನೆಗಳು ಈ ಬರಹಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ಗ್ರಂಥಾಲಯದ ಗೋಡೆ ಮೇಲೆ ವಿವಾದಾತ್ಮಕ ಬರಹ ಬರೆಯಲಾಗಿದೆ. ‘ ಒಂದು ಮಂದಿರ ಕಟ್ಟಿಸಿದರೆ ಸಾವಿರಾರು ಭಿಕ್ಷುಕರು ಹುಟ್ಟಿಕೊಳ್ತಾರೆ, ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ತಾರೆ’ ಎಂದು ಬರೆಯಲಾಗಿದೆ. ಈ ಗೋಡೆ ಬರಹಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಂದಿರ ಬದಲಾಗಿ ಮಸೀದಿ ಎಂದು ಯಾಕೆ ಬಳಕೆ ಮಾಡಿಲ್ಲ? ಎಂದು ಹಿಂದೂಪರ ಸಂಘಟನೆಗಳು ಪ್ರಶ್ನೆ ಮಾಡಿವೆ.’

ಈ ಗ್ರಂಥಾಲಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಬರುತ್ತದೆ. ಅಲ್ಲದೇ ಗ್ರಂಥಾಲಯದ ಗೋಡೆ ಬರಹವನ್ನು ಬದಲಿಸುವಂತೆ ಆಗ್ರಹಗಳು ಕೇಳಿಬಂದಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read