ಪುದೀನಾ ಎಲೆಗಳು ಆರೋಗ್ಯಕಾರಿ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಅದರಲ್ಲೂ ಬೇಸಿಗೆಯಲ್ಲಿ ಪುದೀನಾ ವಾಟರ್ ಕುಡಿಯುವುದರಿಂದ ಹತ್ತಾರು ಬಗೆಯ ಪ್ರಯೋಜನಗಳಿವೆ. ರೋಗಗಳಿಂದ ದೂರವಿರಲು ಇದನ್ನು ಪ್ರತಿದಿನ ಸೇವಿಸಬೇಕು.
ದೇಹಕ್ಕೆ ತಂಪು
ಪ್ರತಿದಿನ ಬೆಳಗ್ಗೆ ಪುದೀನಾ ನೀರನ್ನು ಕುಡಿಯುವುದರಿಂದ ದೇಹ ತಂಪಾಗಿರುತ್ತದೆ. ಇದರಲ್ಲಿ ಫೋಲೇಟ್, ಕ್ಯಾಲ್ಸಿಯಂ, ಕ್ಯಾರೋಟಿನ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಇತರ ಹಲವು ಅಂಶಗಳಿವೆ. ಹಾಗಾಗಿ ಶಾಖದ ಹೊಡೆತದಿಂದ ನಮ್ಮನ್ನು ಇದು ರಕ್ಷಿಸುತ್ತದೆ.
ಚರ್ಮದ ಆರೋಗ್ಯ
ಪ್ರತಿದಿನ ಬೆಳಗ್ಗೆ 1 ಗ್ಲಾಸ್ ಪುದೀನಾ ವಾಟರ್ ಕುಡಿದರೆ ತ್ವಚೆಯಲ್ಲಿ ಸಾಕಷ್ಟು ಹೊಳಪು ಕಾಣಬಹುದು. ಬೇಸಿಗೆಯಲ್ಲಿ ಇದನ್ನು ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ. ಆಯಾಸವನ್ನು ಹೋಗಲಾಡಿಸಬಹುದು. ಚರ್ಮವನ್ನು ಇದು ಆರೋಗ್ಯವಾಗಿರಿಸುತ್ತದೆ.
ಹೊಟ್ಟೆ ಸಮಸ್ಯೆಗೆ ಪರಿಹಾರ
ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಪುದೀನಾ ನೀರನ್ನು ಕುಡಿಯಬೇಕು. ಉತ್ತಮ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಇದು ಬಹಳ ಮುಖ್ಯ. ಅಸಿಡಿಟಿ, ಹೊಟ್ಟೆ ಉರಿ ಮತ್ತು ಎದೆಯುರಿ ಸಮಸ್ಯೆಗಳನ್ನು ತಕ್ಷಣವೇ ನಿವಾರಿಸುತ್ತದೆ.
ಶಾಖದಿಂದ ರಕ್ಷಣೆ
ಪುದೀನಾ ನೀರಿನಲ್ಲಿ ಆ್ಯಂಟಿ ಒಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ, ಆ್ಯಂಟಿ ಫಂಗಲ್ ಗುಣಗಳಿವೆ. ಹಾಗಾಗಿ ಪ್ರತಿದಿನ ಅದನ್ನು ಸೇವಿಸಬೇಕು. ಪುದೀನಾ ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ಬೇಸಿಗೆಯಲ್ಲಿ ಇದನ್ನು ಕುಡಿಯುವುದರಿಂದ ದೇಹ ತಂಪಾಗಿರುತ್ತದೆ.
ತೂಕ ಕಡಿಮೆ ಮಾಡಬಹುದು
ಪುದೀನಾ ವಾಟರ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ವೇಗದ ಚಯಾಪಚಯವು ತೂಕ ನಷ್ಟಕ್ಕೆ ಪ್ರಯೋಜನಕಾರಿಯಾಗಿದೆ.