HomeKarnatakaBIG NEWS: ಶಿಕ್ಷಕನಿಂದಲೇ ವರದಕ್ಷಿಣೆ ಕಿರುಕುಳ; ಪತ್ನಿಯನ್ನು ಥಳಿಸಿ ರಾತ್ರೋರಾತ್ರಿ ಮನೆಯಿಂದ ಹೊರಹಾಕಿದ ಆರೋಪ

BIG NEWS: ಶಿಕ್ಷಕನಿಂದಲೇ ವರದಕ್ಷಿಣೆ ಕಿರುಕುಳ; ಪತ್ನಿಯನ್ನು ಥಳಿಸಿ ರಾತ್ರೋರಾತ್ರಿ ಮನೆಯಿಂದ ಹೊರಹಾಕಿದ ಆರೋಪ

ಚಿತ್ರದುರ್ಗ: ಶಾಲಾ ಶಿಕ್ಷಕ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿರುವ ಘಟನೆ ಚಿತ್ರದುರ್ಗದ ಜೆ.ಎನ್.ಕೋಟೆ ಗ್ರಾಮದಲ್ಲಿ ನಡೆದಿದೆ.

ಶಿಕ್ಷಕ ಕೆಂಚೇಶ್ವರ್ ಎಂಬಾತ ಪತ್ನಿ ಹಾಲಮ್ಮಳಿಗೆ ವರದಕ್ಷಿಣೆ ಕಿರುಕುಳ ನೀಡಿ, ಥಳಿಸಿ ರಾತ್ರೋರಾತ್ರಿ ಮನೆಯಿಂದ ಹೊರ ಹಾಕಿದ್ದಾನೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಹಾಲಮ್ಮ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಕೆಂಚೇಶ್ವರ್ ಜೋಡಿಚಿಕ್ಕೇನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದು, ವರ್ಷದ ಹಿಂದೆ ಹಾಲಮ್ಮ ಎಂಬುವವರನ್ನು ವಿವಾಹವಾಗಿದ್ದ. ಇದೀಗ ವರದಕ್ಷಿಣೆ ಕಿರುಕುಳ ನೀಡಿ ಪತ್ನಿಗೆ ಹಿಂಸಿಸುತ್ತಿದ್ದು, ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಪತ್ನಿ ಹಾಲಮ್ಮ ದೂರು ದಾಖಲಿಸಿದ್ದಾರೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular