alex Certify ಬಾಡಿಗೆ ತಾಯ್ತನಕ್ಕಾಗಿ ವಿದೇಶಕ್ಕೆ ಹೋಗ್ತಿದ್ದಾರೆ ಭಾರತೀಯ ದಂಪತಿಗಳು, ಕಾರಣ ಈ ಕಟ್ಟುನಿಟ್ಟಿನ ನಿಯಮ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಡಿಗೆ ತಾಯ್ತನಕ್ಕಾಗಿ ವಿದೇಶಕ್ಕೆ ಹೋಗ್ತಿದ್ದಾರೆ ಭಾರತೀಯ ದಂಪತಿಗಳು, ಕಾರಣ ಈ ಕಟ್ಟುನಿಟ್ಟಿನ ನಿಯಮ…!

ಮಗುವನ್ನು ಪಡೆಯಬೇಕು ಎನ್ನುವುದು ಎಲ್ಲಾ ದಂಪತಿಗಳ ಕನಸು. ಆದರೆ ಕೆಲವೊಮ್ಮೆ ದೈಹಿಕ ಸಮಸ್ಯೆಗಳಿಂದಾಗಿ ತಾಯ್ತನದ ಸುಖದಿಂದ ಅನೇಕರು ವಂಚಿತರಾಗುತ್ತಾರೆ. ಅಂತಹ ಸಂದರ್ಭದಲ್ಲಿ ಕೆಲವರು ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳನ್ನು ಹೊಂದುವುದು ಸಾಮಾನ್ಯ ಸಂಗತಿಯಾಗಿದೆ.

ಮಕ್ಕಳಿಲ್ಲದ ದಂಪತಿಗಳಿಗೆ ಸರೋಗಸಿ ಎಂಬುದು ವರದಾನವಿದ್ದಂತೆ. ಈ ಪ್ರಕ್ರಿಯೆಯಲ್ಲಿ ಮಗುವನ್ನು 9 ತಿಂಗಳುಗಳ ಕಾಲ ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡು ಹುಟ್ಟಿದ ನಂತರ ಅದನ್ನು ಹಸ್ತಾಂತರಿಸುವ ಮಹಿಳೆಯನ್ನು ಆಯ್ಕೆ ಮಾಡಲಾಗುತ್ತದೆ. ಆಕೆಯನ್ನು ಬಾಡಿಗೆ ತಾಯಿ ಎಂದು ಕರೆಯಲಾಗುತ್ತದೆ. ಆದರೆ ಭಾರತದಲ್ಲಿ ಬಾಡಿಗೆ ತಾಯ್ತನದ ಸಹಾಯ ಪಡೆಯುವುದು ಈಗ ಅಷ್ಟು ಸುಲಭವಲ್ಲ.

ಬಾಡಿಗೆ ತಾಯ್ತನ ಎಂಬುದು ಮಗುವನ್ನು ಹೊಂದಲು ದಂಪತಿಗಳು ಇನ್ನೊಬ್ಬ ಮಹಿಳೆಯ ಗರ್ಭದ ಸಹಾಯವನ್ನು ತೆಗೆದುಕೊಳ್ಳುವ ಸಂಪೂರ್ಣ ಪ್ರಕ್ರಿಯೆಯಾಗಿದೆ. ಸರಳ ಭಾಷೆಯಲ್ಲಿ ಇದನ್ನು ಎರವಲು ಪಡೆದ ಗರ್ಭ ಎಂದೂ ಕರೆಯಬಹುದು. ತಾಯಂದಿರಾಗಲು ಸಾಧ್ಯವಾಗದ ಮಹಿಳೆಯರು ಈ ತಂತ್ರದ ಸಹಾಯವನ್ನು ತೆಗೆದುಕೊಳ್ಳಬಹುದು. ಬಾಡಿಗೆ ತಾಯ್ತನದ ಮೊದಲು ಈ ಬಗ್ಗೆ ಕಾನೂನು ಒಪ್ಪಂದವನ್ನೂ ಮಾಡಿಕೊಳ್ಳಬೇಕಾಗುತ್ತದೆ.

ಅನೇಕ ಸೆಲೆಬ್ರಿಟಿಗಳು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೊಂದಿದ್ದಾರೆ. ಆದರೆ ಈಗ ಭಾರತದಲ್ಲಿ ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟು ಮಾಡಲಾಗಿದೆ. ಇದರಿಂದಾಗಿ ಬಾಡಿಗೆ ತಾಯ್ತನದ ಮೂಲಕ ಪೋಷಕರಾಗುವ ಬಯಕೆಯಿಂದ ದಂಪತಿಗಳು ವಿದೇಶಕ್ಕೆ ಹೋಗುತ್ತಿದ್ದಾರೆ.

ಭಾರತದಲ್ಲಿ ಬಾಡಿಗೆ ತಾಯ್ತನದ ನಿಯಮಗಳನ್ನು ಬದಲಾಯಿಸಿದೆ. ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆ 2021ರ ಪ್ರಕಾರ ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೊಂದಲು ಬಯಸಿದರೆ ತಮ್ಮ ಸಂಬಂಧಿಕರಲ್ಲೇ ಬಾಡಿಗೆ ತಾಯಿಯನ್ನು ಹುಡುಕಬೇಕು. ಅಷ್ಟೇ ಅಲ್ಲ ಬಾಡಿಗೆ ತಾಯಿಗೆ ಹಣ ಪಾವತಿಸುವಂತಿಲ್ಲ. ಈ ನಿಯಮಗಳಿಂದಾಗಿ ಪೋಷಕರಾಗಲು ಬಯಸುವವರು ಬೇರೆ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಮತ್ತು ವಿದೇಶಕ್ಕೆ ಹೋಗುತ್ತಿದ್ದಾರೆ.

ಕಾನೂನಿನ ಪ್ರಕಾರ ವಿವಾಹಿತ ದಂಪತಿಗಳು ಬಾಡಿಗೆ ತಾಯ್ತನದ ಸಹಾಯವನ್ನು ತೆಗೆದುಕೊಳ್ಳಬಹುದು. ಆದರೆ ಕೆಲವು ವೈದ್ಯಕೀಯ ಸಮಸ್ಯೆಯಿಂದ ಪೋಷಕರಾಗಲು ಅಸಾಧ್ಯವಾದಾಗ ಮಾತ್ರ ಇದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇದಲ್ಲದೆ ವಿಧವೆಯರು ಅಥವಾ ವಿಚ್ಛೇದಿತ ಮಹಿಳೆಯರು ಬಾಡಿಗೆ ತಾಯ್ತನದ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ಎರಡು ಷರತ್ತುಗಳಿವೆ. ಮೊದಲನೆಯದಾಗಿ ಅವರ ವಯಸ್ಸು 35 ರಿಂದ 45ರ ನಡುವೆ ಇರಬೇಕು. ಎರಡನೆಯದಾಗಿ ಬಾಡಿಗೆ ತಾಯ್ತನಕ್ಕಾಗಿ ಅವರು ತಮ್ಮ ಸ್ವಂತ ಎಗ್ಸ್ ಬಳಸಬೇಕಾಗುತ್ತದೆ.

ಭಾರತದಲ್ಲಿ ಯಾರು ಬಾಡಿಗೆ ತಾಯ್ತನದ ಸಹಾಯ ಪಡೆಯುವುದು ಅಸಾಧ್ಯ?

ಅವಿವಾಹಿತರು ಇದರ ವ್ಯಾಪ್ತಿಯಿಂದ ಹೊರಗಿದ್ದಾರೆ. ನೀವು ಒಂಟಿಯಾಗಿದ್ದರೆ ಮತ್ತು ಪೋಷಕರಾಗಲು ಬಯಸಿದರೆ ಬಾಡಿಗೆ ತಾಯ್ತನದ ನೆರವು ಪಡೆಯಲು ಸಾಧ್ಯವಿಲ್ಲ. ಇದಲ್ಲದೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುವ ದಂಪತಿಗಳು ಬಾಡಿಗೆ ತಾಯ್ತನದ ಸಹಾಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದಲ್ಲದೆ LGBTQ ಗೆ ಸೇರಿದವರು ಅಥವಾ ಪೋಷಕರಾಗಲು ಬಯಸುವ ಸಲಿಂಗಕಾಮಿ ದಂಪತಿಗಳು ಕೂಡ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವಂತಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...