HomeKarnatakaBIG NEWS: ಇಂದಿನಿಂದ ಬೆಂಗಳೂರಿನ ಈ ಮಾರ್ಗದಲ್ಲಿ 1 ವರ್ಷ ಸಂಚಾರ ಬಂದ್

BIG NEWS: ಇಂದಿನಿಂದ ಬೆಂಗಳೂರಿನ ಈ ಮಾರ್ಗದಲ್ಲಿ 1 ವರ್ಷ ಸಂಚಾರ ಬಂದ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ 1 ಕಿ.ಮೀ ಸಂಚಾರ ಇಂದಿನಿಂದ ಒಂದು ವರ್ಷಗಳ ಕಾಲ ಬಂದ್ ಆಗಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಲಕ್ಕಸಂದ್ರ ಮೆಟ್ರೋ ನಿಲ್ದಾಣ ಕಾಮಗಾರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬನ್ನೇರುಘಟ್ಟ ರಸ್ತೆಯ ಒಂದು ಕಿ.ಮೀ ವ್ಯಾಪ್ತಿಯನ್ನು ಏಪ್ರಿಲ್ 5ರಿಂದ ಒಂದು ವರ್ಷಗಳ ವರೆಗೆ ಬಂದ್ ಆಗಲಿದೆ.

ಲಕ್ಕಸಂದ್ರ ಮೆಟ್ರೋ ನಿಲ್ದಾಣ 21.26 ಕಿ.ಮೀ ಪಿಂಕ್ ಲೈನ್ ಭಾಗವಾಗಿದ್ದು ಮುಂದಿನ ವರ್ಷ ಕಾರ್ಯಾರಂಭವಾಗಲಿದೆ. ಮೈಕೋ ಬಂಡೆ ಸಿಗ್ನಲ್ ನಿಂದ ಆನೆಪಾಳ್ಯ ಜಕ್ಷನ್ ವರೆಗೆ ಡೈರಿ ಸರ್ಕಲ್ ನಿಂದ ವಾಹನಗಳಿಗೆ ಹೋಗುವ ರಸ್ತೆಯನ್ನು ಮುಚ್ಚಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡೈರಿ ವೃತ್ತದಿಂದ ಆನೆಪಾಳ್ಯದವರೆಗೆ ಹೋಗುವ ವಾಹನಸವಾರರು ಮೈಕೋ ಬಂಡೆ ಸಿಗ್ನಲ್ ಬಳಿ ಬಲ ತಿರುವು ಪಡೆದು ನ್ಯೂ ಮೈಕೋ ಲಿಂಕ್ ರಸ್ತೆ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ ಎಡಕ್ಕೆ ತಿರುಗಿ ಆನೆಪಾಳ್ಯ ಜಂಕ್ಷನ್ ಕಡೆಗೆ ಸಾಗಬೇಕು. ಆನೆಪಾಳ್ಯ ಜಂಕ್ಷನ್ ಬನ್ನೇರುಘಟ್ಟ ರಸ್ತೆ ಮತ್ತು ಹೊಸೂರು ರಸ್ತೆಯಿಂದ ಬರುವ ಕ್ರಿಶ್ಚಿಯನ್ ಸ್ಮಶಾನ ಬಳಿ ವಿಲೀನಗೊಳ್ಳುತ್ತದೆ.

ಡೈರಿ ವೃತ್ತದಿಂದ ಶಾಂತಿನಗರ, ವಿಲ್ಸನ್ ಗಾರ್ಡನ್ ಕಡೆ ಹೋಗುವವರು ಮೈಕೋ ಬಂಡೆ ಸಿಗ್ನಲ್ ಮೂಲಕ ಚಲಿಸಬಹುದು ಮತ್ತು ವಿಲ್ಸನ್ ಗಾರ್ಡನ್ 7ನೇ ಮುಖ್ಯರಸ್ತೆ ಕ್ರಾಸ್ ನಲ್ಲಿ ಎಡಕ್ಕೆ ತಿರುವು ಪಡೆಯಬೇಕು. ಆನೆಪಾಳ್ಯ ಜಂಕ್ಷನ್ ನಿಂದ ಡೈರಿ ಸರ್ಕಲ್ ವರೆಗೆ ಸಂಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಂಚಾರಿ ಪೊಲೀಸ್ ವಿಭಾಗ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular