HomeAutoಬೆಚ್ಚಿ ಬೀಳಿಸುವ ದೃಶ್ಯ: ಬೈಕ್ ಸವಾರನಿಗೆ ಗುಮ್ಮಿದ ಕೋಲೆ ಬಸವ; ಭೀಕರ ಅಪಘಾತದಲ್ಲಿ ಬೈಕ್ ಸವಾರ...

ಬೆಚ್ಚಿ ಬೀಳಿಸುವ ದೃಶ್ಯ: ಬೈಕ್ ಸವಾರನಿಗೆ ಗುಮ್ಮಿದ ಕೋಲೆ ಬಸವ; ಭೀಕರ ಅಪಘಾತದಲ್ಲಿ ಬೈಕ್ ಸವಾರ ಜಸ್ಟ್ ಎಸ್ಕೇಪ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಯಾನಕ ಅಪಘಾತವೊಂದು ಸಂಭವಿಸಿದೆ. ರಸ್ತೆ ಬದಿ ಬರುತ್ತಿದ್ದ ಕೋಲೆ ಬಸವ ಇದ್ದಕ್ಕಿದ್ದಂತೆ ಬೈಕ್ ಸವಾರನಿಗೆ ಗುಮ್ಮಿದ್ದು, ಬೈಕ್ ಸವಾರ ಈಚರ್ ವಾಹನದ ಕೆಳಗೆ ಬಿದ್ದಿದ್ದಾನೆ. ಪವಾಡ ಸದೃಶ ರೀತಿಯಲ್ಲಿ ಬೈಕ್ ಸವಾರ ಪಾರಾಗಿದ್ದಾನೆ.

ಮಹಾಲಕ್ಷ್ಮೀ ಲೇಔಟ್ ನಲ್ಲಿ ಸಂಭವಿಸಿರುವ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೋಲೆ ಬಸವ ಗುಮ್ಮುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಈಚರ್ ವಾಹನದ ಕೆಳಗೆ ಹೋಗಿ ಬೈಕ್ ಸವಾರ ಬಿದ್ದಿದ್ದು, ಈಚರ್ ವಾಹನ ಚಾಲಕ ತಕ್ಷಣ ಬ್ರೇಕ್ ಹಾಕಿದ್ದರಿಂದ ಅದೃಷ್ಟವಶಾತ್ ಬೈಕ್ ಸವಾರ ಬಚಾವ್ ಆಗಿದ್ದಾನೆ.

ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯ ಬೆಚ್ಚಿ ಬೀಳಿಸುವಂತಿದೆ. ಮಹಾಲಕ್ಷ್ಮೀ ಲೇಔಟ್ ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular