
ಬೆಂಗಳೂರು: ಹೈಕೋರ್ಟ್ ಹಾಲ್ ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಯತ್ನಿಸಿದ್ದ ಚಿನ್ನಂ ಶ್ರೀನಿವಾಸ್ ಗೆ ಆಪರೇಷನ್ ಸಕ್ಸಸ್ ಆಗಿದೆ.
ಕತ್ತಿನ ಸುತ್ತ ಬೌರಿಂಗ್ ಆಸ್ಪತ್ರೆಯ ವೈದ್ಯರು 9 ಹೊಲಿಗೆ ಹಾಕಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಐಸಿಯುಗೆ ಶಿಫ್ಟ್ ಮಾಡಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ. ಬಿಪಿ ಹೆಚ್ಚಾಗಿರುವುದರಿಂದ ಶ್ರೀನಿವಾಸ್ ವೈದ್ಯರ ನಿಗಾದಲ್ಲಿದ್ದಾರೆ. ಹೈಕೋರ್ಟ್ ಹಾಲ್ ನಲ್ಲಿ ಕತ್ತು ಕೊಯ್ದುಕೊಂಡು ಚಿನ್ನಂ ಶ್ರೀನಿವಾಸ್ ಆತ್ಮಹತ್ಯೆಗೆ ಯತ್ನಿಸಿದ್ದ. ಮೈಸೂರಿನ ವಿಜಯನಗರ ನಿವಾಸಿಯಾಗಿರುವ ಶ್ರೀನಿವಾಸ್ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಲು ಪತ್ನಿಯೊಂದಿಗೆ ಹೈಕೋರ್ಟ್ ಗೆ ಬಂದಿದ್ದರು. ಕೋರ್ಟ್ ಹಾಲ್ ನಲ್ಲಿ ಸಿಬ್ಬಂದಿಗೆ ದೂರಿನ ಪ್ರತಿ ನೀಡಿ ಆತ್ಮಹತ್ಯೆಗೆ ಯತ್ನಿಸಿದ್ದರು.