ಬೆಂಗಳೂರು : ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬ ಬರಲಿದೆ. ಯುಗಾದಿ ಹಬ್ಬದ ಮರುದಿನ ಆಚರಿಸುವ ಹೊಸತೊಡಕು ಹಬ್ಬಕ್ಕೂ ಮುನ್ನವೇ ಮಾಂಸಹಾರಿಗಳಿಗೆ ಬಿಗ್ ಶಾಕ್ ಎದುರಾಗಿದೆ.
ದಿನದಿಂದ ದಿನಕ್ಕೆ ಚಿಕನ್, ಮಟನ್ ಬೆಲೆ ಏರಿಕೆಯಾಗುತ್ತಿದೆ. ಹೌದು, ಸದ್ಯ ಮಾರುಕಟ್ಟೆಯಲ್ಲಿ ಸ್ಕಿನ್ ಔಟ್ ಬಾಯ್ಲರ್ ಕೋಳಿ ಕೆಜಿಗೆ 230-240 ರೂಪಾಯಿವರೆಗೆ ಏರಿಕೆಯಾಗಿದೆ. ಟೈಸನ್ ಕೋಳಿ 270 ರೂಪಾಯಿಗೆ ಏರಿಕೆಯಾಗಿದೆ. ಅಲ್ಲದೇ ಮೀನುಗಳ ಬೆಲೆ ಕೂಡ ಗಗನಕ್ಕೇರಿದೆ. ಬಿಸಿಲಿನ ತಾಪಮಾನದಿಂದ ಕೋಳಿ, ಮೀನು ದರ ಏರಿಕೆಯಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಹಂದಿ ಮಾಂಸದ ಬೆಲೆ 300 ರಿಂದ 450-500ರ ಗಡಿ ದಾಟಿದೆ. ಹಾಗೂ ಕುರಿ ಮಾಂಸ 700-800 ರೂವರೆಗೆ ಮಾರಾಟವಾಗುತ್ತಿದೆ. ಅಲ್ಲದೇ ಹೇಳಿ ಕೇಳಿ ಈಗ ಮದುವೆ ಸೀಸನ್..ಬೀಗರೂಟಕ್ಕೆ ಭಾರಿ ಪ್ರಮಾಣದ ಮಾಂಸಕ್ಕೆ ಬೇಡಿ ಬರುತ್ತದೆ…ಇದರಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ.