ಟೋಕಿಯೊ : ಜಪಾನ ನ ಉತ್ತರ ಕರಾವಳಿಯ ಇವಾಟೆ ಪ್ರಾಂತ್ಯದಲ್ಲಿ ಸೋಮವಾರ-ಮಂಗಳವಾರ ಮಧ್ಯರಾತ್ರಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ನ ಹವಾಮಾನ ಕೇಂದ್ರ ತಿಳಿಸಿದೆ.
ಭಾರತೀಯ ಕಾಲಮಾನ ಬೆಳಗ್ಗೆ 00.59ಕ್ಕೆ ಭೂಕಂಪ ಸಂಭವಿಸಿದೆ.ಭೂಕಂಪದ ಕೇಂದ್ರಬಿಂದು ಇವಾಟೆ ಪ್ರಿಫೆಕ್ಚರ್ನ ಉತ್ತರ ಕರಾವಳಿ ಭಾಗವಾಗಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ. ತಕ್ಷಣದ ಹಾನಿಯ ಬಗ್ಗೆ ಯಾವುದೇ ವರದಿಗಳಿಲ್ಲ.