ಕುಟುಂಬದವರ ಎದುರೇ ಸಹೋದರಿಯನ್ನು ದುರುಳನೋರ್ವ ಕತ್ತು ಹಿಸುಕಿ ಕೊಂದ ಆಘಾತಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ತೋಬಾ ಟೇಕ್ ಸಿಂಗ್ ನಗರದ ಮನೆಯಲ್ಲಿ ಸಹೋದರನೊಬ್ಬ ತನ್ನ ಸಹೋದರಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾದ ಈ ಭಯಾನಕ ಸೆರೆಹಿಡಿಯಲಾಗಿದ್ದು, ವಿಡಿಯೋ ವೈರಲ್ ಆಗಿದೆ.
ವೀಡಿಯೊದಲ್ಲಿ, 22 ವರ್ಷದ ಮಾರಿಯಾ ಎಂದು ಗುರುತಿಸಲ್ಪಟ್ಟ ತನ್ನ ಸಹೋದರಿಯನ್ನು ಕತ್ತು ಹಿಸುಕಿ ಕೊಲ್ಲುವುದನ್ನು ನೋಡಬಹುದು. ಶಾಕಿಂಗ್ ವಿಚಾರ ಎಂದರೆ ಸಂತ್ರಸ್ತೆಯ ಅತ್ತಿಗೆ ಸೇರಿದಂತೆ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವ್ಯಕ್ತಿ ಈ ಕೃತ್ಯವನ್ನು ಎಸಗಿದ್ದಾನೆ. ನಂತರ ಆತನ ತಂದೆ ಕುಡಿಯಲು ನೀರು ಕೊಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
https://twitter.com/i/status/1773026194490810379