HomeKarnatakaBIG NEWS: ವಿಶೇಷ ಚೇತನಳನ್ನು ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ವಂಚನೆ; FIR ದಾಖಲು

BIG NEWS: ವಿಶೇಷ ಚೇತನಳನ್ನು ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ವಂಚನೆ; FIR ದಾಖಲು

ಬೆಂಗಳೂರು: ವಿಶೇಷ ಚೇತನಳನ್ನು ವಿವಾಹವಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣವನ್ನು ಆಕೆಯಿಂದ ದೋಚಿ ವಂಚಕ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸುರೇಂದ್ರ ಮೂರ್ತಿ ಎಂಬಾತ ವಿಶೇಷ ಚೇತನ ಯುವತಿಗೆ ಪರಿಚಯನಾಗಿ, ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಪರಸ್ಪರ ನಂಬಿಕೆ ಹೆಚ್ಚುತ್ತಿದ್ದಂತೆ ಸುರೇಂದ್ರ ಮೂರ್ತಿ ತಾನು ಒಂದು ಬ್ಯುಸಿನೆಸ್ ಮಾಡುತ್ತಿದ್ದೇನೆ ಅದಕ್ಕೆ ಹಣ ಬೇಕು ಎಂದು ಹೇಳಿ ಯುವತಿ ಬಳಿಯಿಂದ ಹಣ ಪಡೆದಿದ್ದ. ತನ್ನನ್ನು ಮದುವೆಯಾಗಲು ಒಪ್ಪಿದ ಪ್ರಿಯತಮನಿಗಾಗಿ ಯುವತಿ ಸಾಲ ಮಾಡಿ, ಇದ್ದ ಒಡವೆಗಳನ್ನೂ ಅಡವಿಟ್ಟು ಹಣ ನೀಡಿದ್ದಳು.

ಹಣ ಪಡೆದ ಆಸಾಮಿ ತನ್ನ ಅಸಲಿ ವರಸೆ ತೋರಲು ಆರಂಭಿಸಿದ್ದಾನೆ. ಮದುವೆಯಾಗಲು ನಿರಾಕರಿಸಿದ್ದಾನೆ. ಅಲ್ಲದೇ ಹಣವನ್ನೂ ವಾಪಾಸ್ ನೀಡದೇ ಎಸ್ಕೇಪ್ ಆಗಿದ್ದಾನೆ. ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಯುವತಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ಸುರೇಂದ್ರ ಮೂರ್ತಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular