HomeEntertainment'ದೇಸಾಯಿ' ಚಿತ್ರದ ಫ್ಯಾಮಿಲಿ ಸಾಂಗ್ ರಿಲೀಸ್

‘ದೇಸಾಯಿ’ ಚಿತ್ರದ ಫ್ಯಾಮಿಲಿ ಸಾಂಗ್ ರಿಲೀಸ್

ನಾಗಿ ರೆಡ್ಡಿ ಬಡ ನಿರ್ದೇಶನದ ಪ್ರವೀಣ್ ಕುಮಾರ್ ಅಭಿನಯದ ‘ದೇಸಾಯಿ’ ಚಿತ್ರ ತನ್ನ ಟೈಟಲ್ ನಿಂದಲೇ ಸಾಕಷ್ಟು ನಿರೀಕ್ಷೆ  ಮೂಡಿಸಿದ್ದು, ಇನ್ನೇನು ಶೀಘ್ರದಲ್ಲೇ ತೆರೆ ಮೇಲೆ  ಬರಲು ಸಜ್ಜಾಗಿದೆ ದೇಸಾಯಿ ಚಿತ್ರತಂಡ ‘ಹೋಳಿ ಹುಣ್ಣಿಮೆ ಹಬ್ಬಕ್ಕ’ ಎಂಬ ಲಿರಿಕಲ್ ಹಾಡೊಂದನ್ನು ಬಿಡುಗಡೆ ಮಾಡಿದೆ. ಈ ಹಾಡಿಗೆ ಅನಿರುದ್ಧ ಶಾಸ್ತ್ರಿ ಧ್ವನಿಯಾಗಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ವೀರಭದ್ರೇಶ್ವರ ಕ್ರಿಯೇಟಿವ್ ಫಿಲ್ಮ್ಸ್ ಬ್ಯಾನರ್ ನಲ್ಲಿ ಮಹಾಂತೇಶ್ ವಿ ಚೋಳಚ ಗುಡ್ಡ ನಿರ್ಮಾಣ ಮಾಡಿದ್ದಾರೆ. ಪ್ರವೀಣ್ ಕುಮಾರ್ ಮತ್ತು ರಾಧ್ಯ ಪ್ರಮುಖ ಪಾತ್ರದಲ್ಲಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ಪಿಕೆ ಎಚ್ ದಾಸ್ ಛಾಯಾಗ್ರಹಣವಿದೆ. ಸಾಯಿ ಕಾರ್ತಿಕ್ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular