‘ಲವ್ 360’ ಖ್ಯಾತಿಯ ಪ್ರವೀಣ್ ಕುಮಾರ್ ಅಭಿನಯದ ದೇಸಾಯಿ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ಚಾಮರಾಜಪೇಟೆಯಲ್ಲಿ ನೆರವೇರಲಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಜಯಬಸವ ಕುಮಾರ ಸ್ವಾಮಿಗಳು ಮತ್ತು ಶಾಸಕರಾದ ಲಕ್ಷ್ಮಣ ಸವದಿ ಆಗಮಿಸಲಿದ್ದಾರೆ.
ನಾಗಿ ರೆಡ್ಡಿ ನಿರ್ದೇಶನ ಈ ಚಿತ್ರದಲ್ಲಿ ಪ್ರವೀಣ್ ಕುಮಾರ್ ಮತ್ತು ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರವೀಣ್ ಕುಮಾರ್ ಅಥ್ಲೆಟಿಕ್ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಜುನಾಥ್ ಹೆಗಡೆ, ಸೃಷ್ಟಿ, ಒರಟ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ಉಳಿದ ಪಾತ್ರ ವರ್ಗದಲ್ಲಿದ್ದಾರೆ.
ವೀರಭದ್ರೇಶ್ವರ ಕ್ರಿಯೇಟಿವ್ ಫಿಲ್ಮ್ಸ್ ಬ್ಯಾನರ್ ನಲ್ಲಿ ಮಹಾಂತೇಶ್ ವಿ ಚೋಳಚ ಗುಡ್ಡ ನಿರ್ಮಾಣ ಮಾಡಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ ಸಂಯೋಜನೆ ನೀಡಿದ್ದು, ದೀಪು ಎಸ್ ಕುಮಾರ್ ಸಂಕಲನ, ಪಿಕೆ ಎಚ್ ದಾಸ್ ಛಾಯಾಗ್ರಹಣವಿದೆ.
https://twitter.com/aanandaaudio/status/1768978083456151558
https://twitter.com/aanandaaudio/status/1768997360385032199