HomeEntertainment61ನೇ ವಸಂತಕ್ಕೆ ಕಾಲಿಟ್ಟ ನವರಸ ನಾಯಕ ಜಗ್ಗೇಶ್

61ನೇ ವಸಂತಕ್ಕೆ ಕಾಲಿಟ್ಟ ನವರಸ ನಾಯಕ ಜಗ್ಗೇಶ್

ವಿಭಿನ್ನ ಪಾತ್ರಗಳ ಖುಷಿಯಲ್ಲಿ ಜಗ್ಗೇಶ್‌ | udayavani

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ನವರಸ ನಾಯಕ ಜಗ್ಗೇಶ್ 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಾಸ್ಯ ನಟನಾಗಿ, ನಿರ್ದೇಶಕನಾಗಿ, ಗಾಯಕನಾಗಿ ಮಿಂಚಿರುವ ಜಗ್ಗೇಶ್ ಸಿನಿಮಾಗಳಲ್ಲಿ ಎಲ್ಲಾ ಪಾತ್ರವನ್ನು ನಿಭಾಯಿಸುವ ಮೂಲಕ  ನವರಸ ನಾಯಕನೆಂದೇ ಖ್ಯಾತಿ ಪಡೆದಿದ್ದಾರೆ.

1982ರಲ್ಲಿ ತೆರೆಕಂಡ ಅನಂತ್ ನಾಗ್ ಅವರ ‘ಇಬ್ಬನಿ ಕರಗಿತು’ ಚಿತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು. ಹಲವಾರು ವರ್ಷಗಳ ಕಾಲ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಜಗ್ಗೇಶ್ 1992ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘ತರ್ಲೆ ನನ್ಮಗ’ ಚಿತ್ರದಲ್ಲಿ ಮೊದಲ ಬಾರಿ ನಾಯಕ ನಟನಾಗಿ ಅಭಿನಯಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2012ರಲ್ಲಿ ತಮ್ಮ ಮಗ ಗುರುರಾಜ್ ಅವರಿಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕನಾಗಿಯೂ ಹೆಸರು ಮಾಡಿದರು. ಜಗ್ಗೇಶ್ ಅಭಿನಯದ ‘ರಂಗನಾಯಕ’ ಚಿತ್ರ ಇದೇ ತಿಂಗಳು ಶಿವರಾತ್ರಿಯ ಹಬ್ಬದಂದು  ತೆರೆಕಂಡಿತ್ತು, ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವ ಮೂಲಕ ರಾಜ್ಯದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular