HomeKarnatakaBIG NEWS : ‘ಜೀವಂತ ಪ್ರಮಾಣ ಪತ್ರ’ ಸಲ್ಲಿಸದೇ ಇರುವ ನಿವೃತ್ತ ಶಿಕ್ಷಕರ ಗಮನಕ್ಕೆ, ಸರ್ಕಾರದ...

BIG NEWS : ‘ಜೀವಂತ ಪ್ರಮಾಣ ಪತ್ರ’ ಸಲ್ಲಿಸದೇ ಇರುವ ನಿವೃತ್ತ ಶಿಕ್ಷಕರ ಗಮನಕ್ಕೆ, ಸರ್ಕಾರದ ಈ ಆದೇಶ ಮಿಸ್ ಮಾಡದೇ ಓದಿ

ಬೆಂಗಳೂರು :  ಜೀವಂತ ಪ್ರಮಾಣಗಳ ಪ್ರತಿಗಳನ್ನು / ಸ್ವೀಕೃತಿಗಳನ್ನು ಈ ಕಛೇರಿಗೆ ಸಲ್ಲಿಸಿರುವ ಮಾಸಿಕ ಗೌರವ ಧನವನ್ನು ಪಡೆಯುತ್ತಿರುವ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ, ಮುಖ್ಯ ಶಿಕ್ಷಕರಿಗೆ ಈ ಗೌರವ ಧನವನ್ನು ಮುಂದುವರೆಸುವ & ಸಲ್ಲಿಸದಿರುವವರಿಗೆ ಸ್ಥಗಿತಗೊಳಿಸುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಏನಿದೆ ಆದೇಶದಲ್ಲಿ..?

ಈ ಯೋಜನೆಗೆ ಒಳಪಡುವ ಒಟ್ಟು 13 ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಹಾಗೂ ಉಲ್ಲೇಖ-05 ರೊಂದಿಗಿನ ಅನುಬಂಧ-ಡಿ ರಲ್ಲಿನ (ದಿನಾಂಕ:10.10.2023) ಈ ಯೋಜನೆಗೆ ಒಳಪಡುವ ಒಟ್ಟು 53 ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಿಗೆ, ವಿಶೇಷ ಶಿಕ್ಷಕರಿಗೆ ಮತ್ತು ಮುಖ್ಯ ಶಿಕ್ಷಕರಿಗೆ ಮಾತ್ರ ಮಾರ್ಚ್-2023 ರಿಂದ ಸದರಿ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳನ್ನು / ಸ್ವೀಕೃತಿ ಪತ್ರಗಳನ್ನು ಸಲ್ಲಿಸುವವರೆಗೆ ಈ ಗೌರವ ಧನ ಪಾವತಿಸುತ್ತಿರುವುದನ್ನು ಸ್ಥಗಿತಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಲ್ಲೇಖ-01 & 02 ರಂತೆ, ನವೆಂಬರ್-2022 & ನವೆಂಬರ್-2023 ಮತ್ತು ನಂತರದ ಮಾಹೆಗಳಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಪಡೆದಿರುವ ಅಥವಾ ಪಿಂಚಣಿ ಪಡೆಯುತ್ತಿರುವ ಬ್ಯಾಂಕ್ಗಳಿಗೆ / ಸಂಬಂಧಪಟ್ಟ ಬ್ಯಾಂಕ್ಗಳಿಗೆ / ಈ ಗೌರವ ಧನವನ್ನು ಪಡೆಯುತ್ತಿರುವ ಬ್ಯಾಂಕ್ಗಳಿಗೆ ಒದಗಿಸಿರುವ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳ / ಸ್ವೀಕೃತಿ ಪತ್ರಗಳ ಯಥಾಪ್ರತಿಗಳನ್ನು ಸದರಿ ಫಲಾನುಭವಿಗಳ ಸಂಘಟನೆಯ ಮೂಲಕ ಈ ಕಛೇರಿಗೆ ಸಲ್ಲಿಸಲು ಸೂಕ್ತ ಕ್ರಮವಹಿಸುವಂತೆ ಸದರಿ ಫಲಾನುಭವಿಗಳನ್ನು ಮತ್ತು ಈ ಸಂಘಟನೆಯನ್ನು ಕೋರಲಾಗಿದೆ. ತದನಂತರ ಸದರಿ ದಾಖಲೆಗಳ ಆಧಾರದ ಮೇಲೆ ಈ ಗೌರವ ಧನ ಪಾವತಿಸುತ್ತಿರುವುದನ್ನು ಮುಂದುವರೆಸಲು ಅಥವಾ ಸ್ಥಗಿತಗೊಳಿಸಲು ನಿಯಮಾನುಸಾರ ಸೂಕ್ತ ಕ್ರಮವಹಿಸಲಾಗುವುದು ಎಂದು ಉಲ್ಲೇಖ-05 & 06 ರಲ್ಲಿ ತಿಳಿಸಲಾಗಿದೆ. ಈ ಸಂಬಂಧ ಸದರಿ ಫಲಾನುಭವಿಗಳಿಗೆ ದೂರವಾಣಿ ಮೂಲಕ, ಮುದ್ದಾಂ & ಸದರಿ ಸಂಘಟನೆಯ ಮೂಲಕವಿವಿಧ ದಿನಾಂಕಗಳಲ್ಲಿ ಸಾಕಷ್ಟು ಬಾರಿ ತಿಳುವಳಿಕೆ / ಮಾಹಿತಿ ನೀಡಿ, ಕಾಲಾವಕಾಶವನ್ನು ಸಹ ನೀಡಲಾಗಿದೆ.

ಅದರಂತೆ, ಇಲ್ಲಿಯವರೆಗೆ ಸದರಿ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳನ್ನು / ಸ್ವೀಕೃತಿ ಪತ್ರಗಳನ್ನು ಈ ಕಛೇರಿಗೆ ಸಲ್ಲಿಸಿರುವ ಈ ಫಲಾನುಭವಿಗಳಿಗೆ ಈ ಗೌರವ ಧನ ಪಾವತಿಸುತ್ತಿರುವುದನ್ನು ನಿಯಮಾನುಸಾರ ಮುಂದುವರೆಸಲು, ಸದರಿ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳನ್ನು / ಸ್ವೀಕೃತಿ ಪತ್ರಗಳನ್ನು ಸಲ್ಲಿಸಲು ಬಾಕಿ ಇರುವ ಸದರಿ ಫಲಾನುಭವಿಗಳು ಅವುಗಳನ್ನು ಸಲ್ಲಿಸಿದ ನಂತರ ಅವರುಗಳಿಗೂ ಸಹ ಸದರಿ ಈ ಗೌರವ ಧನ ಪಾವತಿಸುವುದನ್ನು ಮುಂದುವರೆಸಲು ನಿಯಮಾನುಸಾರ ಸೂಕ್ತ ಕ್ರಮವಹಿಸುವಂತೆ ಉಲ್ಲೇಖ-07 ರಲ್ಲಿ ಕೋರಲಾಗಿದೆ.

ಈ ಯೋಜನೆಗೆ ಒಳಪಡುವ ಒಟ್ಟು 169 ಫಲಾನುಭವಿಗಳ (ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತರು) ಪೈಕಿ ದಿನಾಂಕ: 05.03.2024 ರವರೆಗೆ ಒಟ್ಟು 127 ಮಂದಿ ಫಲಾನುಭವಿಗಳು ಮಾತ್ರ ಸದರಿ ಜೀವಂತ ಪ್ರಮಾಣ ಪತ್ರಗಳ (Life certificates) ಪ್ರತಿಗಳ / ಸ್ವೀಕೃತಿ ಪತ್ರಗಳ ಪ್ರತಿಗಳನ್ನು ಈ ಕಛೇರಿಗೆ ಸಲ್ಲಿಸಿದ್ದು. ಇನ್ನು ಒಟ್ಟು 42 ಮಂದಿ ಫಲಾನುಭವಿಗಳು ಸಲ್ಲಿಸಿರುವುದಿಲ್ಲ ಎಂದು ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular