alex Certify ಭಾರತದಲ್ಲಿ ಹೆಚ್ಚುತ್ತಲೇ ಇದೆ ಕಿಡ್ನಿ ಕಾಯಿಲೆ; ನೋವು ನಿವಾರಕಗಳ ಸೇವನೆಯಿಂದ ಮೂತ್ರಪಿಂಡಕ್ಕೆ ಹಾನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಹೆಚ್ಚುತ್ತಲೇ ಇದೆ ಕಿಡ್ನಿ ಕಾಯಿಲೆ; ನೋವು ನಿವಾರಕಗಳ ಸೇವನೆಯಿಂದ ಮೂತ್ರಪಿಂಡಕ್ಕೆ ಹಾನಿ….!

ಭಾರತದಲ್ಲಿ ಕ್ಯಾನ್ಸರ್‌ ಜೊತೆಜೊತೆಗೆ ಕಿಡ್ನಿ ಕಾಯಿಲೆ ಕೂಡ ಹೆಚ್ಚುತ್ತಲೇ ಇದೆ. ಶೇ.10 ರಷ್ಟು ಜನರು ದೇಶದಲ್ಲಿ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಹೆಚ್ಚಿನ ರೋಗಿಗಳಿಗೆ ತಮ್ಮ ಕಾಯಿಲೆಯ ಬಗ್ಗೆ ತಡವಾಗಿ ತಿಳಿಯುತ್ತದೆ, ಇದರಿಂದಾಗಿ ಮೂತ್ರಪಿಂಡ ವೈಫಲ್ಯ ಕೂಡ ಹೆಚ್ಚುತ್ತಿದೆ.

ಬಹುದೊಡ್ಡ ಸವಾಲೆಂದರೆ 70 ಪ್ರತಿಶತ ರೋಗಿಗಳಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗಿರುತ್ತದೆ. ಏಮ್ಸ್ ವರದಿಯ ಪ್ರಕಾರ ಭಾರತದಲ್ಲಿ ಶೇ.7ರಷ್ಟು ಜನರು ನೋವು ನಿವಾರಕಗಳನ್ನು ಸೇವಿಸುವ ಮೂಲಕ ಕಿಡ್ನಿಗೆ ಹಾನಿ ಮಾಡಿಕೊಳ್ಳುತ್ತಿದ್ದಾರೆ.

ರಕ್ತದಲ್ಲಿನ ಯೂರಿಯಾ ಮತ್ತು ಕ್ರಿಯೇಟಿನೈನ್ ಅನ್ನು ಕಾಲಕಾಲಕ್ಕೆ ಪರೀಕ್ಷಿಸಿದರೆ, ಮೂತ್ರ ಪರೀಕ್ಷೆ ಮಾಡಿಸಿಕೊಂಡರೆ ಕಿಡ್ನಿ ಸಮಸ್ಯೆಯ ಆರಂಭಿಕ ಲಕ್ಷಣಗಳನ್ನು ಪತ್ತೆ ಮಾಡಬಹುದು. ರೋಗಲಕ್ಷಣಗಳು ಕಾಣಿಸಿಕೊಳ್ಳುವುದು ತಡವಾಗುವುದರಿಂದ ನಿಯಮಿತ ತಪಾಸಣೆ ಮೂಲಕ ಮಾತ್ರ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಕಂಡು ಹಿಡಿಯಬಹುದು.

ಮೂತ್ರಪಿಂಡ ಚಿಕಿತ್ಸೆಗೆ ಔಷಧಿ, ಶಸ್ತ್ರಚಿಕಿತ್ಸೆ, ಡಯಾಲಿಸಿಸ್ ಮತ್ತು ಕಸಿ ಸೇರಿದಂತೆ ಹಲವು ಆಯ್ಕೆಗಳಿವೆ. ಆದರೆ ಗಂಭೀರ ಸಮಸ್ಯೆಗಳಿದ್ದರೆ ರೋಗಿಗಳನ್ನು ಬದುಕಿಸುವುದು ಕಷ್ಟ. ಕಿಡ್ನಿ ರೋಗಿಗಳಿಗೆ ಅಧಿಕ ರಕ್ತದೊತ್ತಡದ ಅಪಾಯವಿರುತ್ತದೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವು ಕಡಿಮೆ ಇರುತ್ತದೆ. ಈ ಕಾರಣದಿಂದಾಗಿ ಅವರ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.

ಮೂತ್ರಪಿಂಡದ ಪ್ರಮುಖ ಕಾರ್ಯವೆಂದರೆ ರಕ್ತವನ್ನು ಫಿಲ್ಟರ್ ಮಾಡುವುದು. ಇದು ಸರಿಯಾಗಿರಬೇಕೆಂದರೆ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ಮೂತ್ರಪಿಂಡವು ಮೂಳೆಗಳನ್ನು ಆರೋಗ್ಯಕರವಾಗಿಡಲು ವಿಟಮಿನ್ ಡಿ ಅನ್ನು ಸಕ್ರಿಯಗೊಳಿಸುತ್ತದೆ ಮತ್ತು ಕ್ಯಾಲ್ಸಿಯಂ ಅನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ, ಆದರೆ ಇದಕ್ಕಾಗಿ ಮೂತ್ರಪಿಂಡಕ್ಕೆ ಸಾಕಷ್ಟು ಪ್ರೋಟೀನ್, ಫೈಬರ್, ಸೋಡಿಯಂ ಮತ್ತು ಪೊಟ್ಯಾಸಿಯಮ್ ಅಗತ್ಯವಿರುತ್ತದೆ. ಆದ್ದರಿಂದ ಹೆಚ್ಚು ಸಮತೋಲಿತ ಆಹಾರ ಮತ್ತು ಸಾಧ್ಯವಾದಷ್ಟು ನೀರನ್ನು ಸೇವಿಸಿ.

ಆಯುರ್ವೇದ ಔಷಧಗಳು ಮೂತ್ರಪಿಂಡಗಳಿಗೆ ಬಹಳ ಪ್ರಯೋಜನಕಾರಿ. ಆಯುರ್ವೇದದ ಗಿಡಮೂಲಿಕೆಗಳು ಮೂತ್ರಪಿಂಡವನ್ನು ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ವೈದ್ಯರೇ ಹೇಳುವ ಪ್ರಕಾರ ಆಯುರ್ವೇದದಲ್ಲಿ ಕಿಡ್ನಿಯನ್ನು ಬಲಪಡಿಸಲು ಹಲವು ಔಷಧಗಳು ಲಭ್ಯವಿವೆ. ತಜ್ಞರ ಪ್ರಕಾರ  ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಪ್ರಪಂಚದಾದ್ಯಂತ ನಿರಂತರವಾಗಿ ಹೆಚ್ಚುತ್ತಿದೆ. ಜಾಗತಿಕ ಮಟ್ಟದಲ್ಲಿ ಇದು ಸುಮಾರು 13 ಪ್ರತಿಶತದವರೆಗಿದೆ. ಭಾರತದಲ್ಲಿ 10 ಕಿಡ್ನಿ ರೋಗಿಗಳ ಪೈಕಿ 9ಕಿ ರೋಗಿಗಳಿಗೆ ಡಯಾಲಿಸಿಸ್ ಮತ್ತು ಕಸಿ ಮುಂತಾದ ದುಬಾರಿ ಚಿಕಿತ್ಸೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಂಥವರು ಆಯುರ್ವೇದ ಔಷಧಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ತರಬೇತಿ ಪಡೆದ ಆಯುರ್ವೇದ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...