ಬೆಂಗಳೂರು: ದೇವಾಲಯಗಳಲ್ಲಿ ನೀಡಲಾಗುವ ಪ್ರಸಾದ ಗುಣಮಟ್ಟ ಪರೀಕ್ಷಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಧಾರ್ಮಿಕ ತತ್ತಿ ಇಲಾಖೆ ಪತ್ರ ಬರೆದಿದೆ.
ಆಹಾರ ಗುಣಮಟ್ಟದ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹಿಂದೂಪರ ಸಂಘಟನೆಗಳು ಕೇವಲ ದೇವಾಲಯಗಳ ಮೇಲೆ ಕ್ರಮವೇಕೆ ಎಂದು ಪ್ರಶ್ನಿಸಿವೆ. ಪ್ರಸಾದದ ಕಚ್ಚಾ ವಸ್ತು ತಪಾಸಣೆ ಮಾಡುವುದನ್ನು ಸ್ವಾಗತಿಸುತ್ತೇವೆ. ಇದುವರೆಗೆ ಹಿಂದೂ ದೇವಾಲಯಗಳಲ್ಲಿ ಪ್ರಸಾದದಿಂದ ಎಷ್ಟು ದುರ್ಘಟನೆ ಸಂಭವಿಸಿವೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು. ಯಾವ ಆಧಾರದ ಮೇಲೆ ಸರ್ಕಾರ ಈ ಸೂಚನೆ ನೀಡಿದೆ ಎಂಬುದನ್ನು ತಿಳಿಸಬೇಕು. ಅನ್ಯ ಧರ್ಮಗಳ ಪ್ರಸಾದ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಬೇಕು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ, ದೇವಾಲಯಗಳಲ್ಲಿ ಪ್ರಸಾದ ಕೊಡಲಿ. ಗುಣಮಟ್ಟ ಕಾಪಾಡಲಿ. ಆಹಾರ ಗುಣಮಟ್ಟ ದೃಷ್ಟಿಯಿಂದ ಈ ಆದೇಶ ನೀಡಿದ್ದು, ಇದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ.