HomeKarnatakaBIG NEWS: ಹಣದ ಆಸೆಗಾಗಿ ಬಾಲಕಿಗೆ ಚಿತ್ರಹಿಂಸೆ ಪ್ರಕರಣ; ಸಂತ್ರಸ್ತೆ ದೊಡ್ಡಮ್ಮ ಸೇರಿ ಇಬ್ಬರ ವಿರುದ್ಧ...

BIG NEWS: ಹಣದ ಆಸೆಗಾಗಿ ಬಾಲಕಿಗೆ ಚಿತ್ರಹಿಂಸೆ ಪ್ರಕರಣ; ಸಂತ್ರಸ್ತೆ ದೊಡ್ಡಮ್ಮ ಸೇರಿ ಇಬ್ಬರ ವಿರುದ್ಧ FIR ದಾಖಲು

ತುಮಕೂರು: ಹಣದ ಆಸೆಗಾಗಿ ತಾಯಿಯಿಲ್ಲ ಬಾಲಕಿಗೆ ದೊಡ್ಡಮ್ಮನೇ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ದೊಡ್ಡಮ್ಮ ಹಾಗೂ ಆಕೆಯ ಮಗನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ತಾಯಿಯಿಲ್ಲದ ಬಾಲಕಿ ಲಕ್ಷ್ಮೀ ಖಾತೆಯಲ್ಲಿದ್ದ 4 ಲಕ್ಷದ ಹಣಕ್ಕಾಗಿ ದೊಡ್ಡಮ್ಮನೇ ಬಾಲಕಿ ಮೇಲೆ ಹಲ್ಲೆ ನಡೆಸಿ, ಚೆಕ್ ಮೇಲೆ ಸಹಿ ಹಾಕುವಂತೆ ಒತ್ತಾಯಿಸಿದ್ದಳು. ಬಾಲಕಿ ಚೆಕ್ ಗೆ ಸಹಿ ಹಾಕಲು ನಿರಾಕರಿಸಿದಾಗ ದೊಡ್ಡಮ್ಮ ನಂಜಮ್ಮ ಹಾಗೂ ಆಕೆಯ ಮಗ ಬಸವರಾಜ್ ಬಾಲಕಿಯನ್ನು ಕಟ್ಟಿಹಾಕಿ ಆಕೆಯ ತೊಡೆಯಮೇಲೆ ಕಾದ ಇಸ್ತ್ರಿ ಪೆಟ್ಟಿಗೆ ಇಟ್ಟು ಸುಟ್ಟಿದ್ದರು. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ನಿಡಗಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.

ಬಾಲಕಿ ಪರೀಕ್ಷೆಗೂ ಶಾಲೆಗೆ ಬಾರದಿದ್ದಾಗ ವಿಚಾರಿಸಲೆಂದು ಶಿಕ್ಷಕರು ಬಾಲಕಿ ಮನೆಗೆ ಬಂದಾಗ ಬಾಲಕಿ ಶಿಕ್ಷಕರ ಬಳಿ ವಿಷಯ ತಿಳಿಸಿದ್ದಳು. ಈ ಮೂಲಕ ಘಟನೆ ಬೆಳಕಿಗೆ ಬಂದಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಬಾಲಕಿ ಲಕ್ಷ್ಮೀ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಾಲಕಿಯ ದೊಡ್ಡಮ್ಮ ನಂಜಮ್ಮ, ಆಕೆಯ ಮಗ ಬಸವರಾಜ್ ವಿರುದ್ಧ ಬಡವನಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 323, 324, 504, 506, 34ರ ಅಡಿಯಲ್ಲಿ ಎಫ್ ಐಆರ್ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular