HomeKarnatakaBIG NEWS: ಎಂಇಎಸ್ ಮುಖಂಡ ಶುಭಂ ಶಳಕೆ ಬಂಧನ

BIG NEWS: ಎಂಇಎಸ್ ಮುಖಂಡ ಶುಭಂ ಶಳಕೆ ಬಂಧನ

ಬೆಳಗಾವಿ: ಭಾಷಾ ವೈಷಮ್ಯದ ವಿಷಬೀಜ ಬಿತ್ತಿ ನಾಡದ್ರೋಹಿ ಕೆಲಸ ಮಾಡಿ ಪುಂಡಾಟ ಮೆರೆಯುತ್ತಿದ್ದ ಎಂಇಎಸ್ ಮುಖಂಡ ಶುಭಂ ಶಳಕೆಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಜೈ ಕರ್ನಾಟಕ ಎಂದು ಘೋಷಣೆ ಕೂಗಿದ್ದ ಉದ್ಯಮಿಯ ಕಾರ್ಖಾನೆ ಹಾಗೂ ಕಚೇರಿಯ ಗೋಡೆಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟ ಮೆರೆದಿದ್ದ ಶುಭಂ ಶಳಕೆ, ನಾಡ ವಿರೋಧಿ ಹೇಳಿಕೆ ನೀಡಿದ್ದ. ಈತನ ವಿರುದ್ಧ ಬೆಳಗಾವಿ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಭಾಷಾ ವೈಷ್ಯಮ್ಯ ಬಿತ್ತುತ್ತ, ಕಿಡಿಗೇಡಿ ಕೃತ್ಯವೆಸಗುತಿದ್ದ ಹಿನ್ನೆಲೆಯಲ್ಲಿ ಮಾಳಮಾರುತಿ ಠಾಣೆಯ ಸಿಪಿಐ ಕಾಲಿಮಿರ್ಚಿ ಶುಭಂ ಶಳಕೆಯನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular