ನವದೆಹಲಿ: ರಾಷ್ಟ್ರ ರಾಜಧಾನಿಯ ಕೇಶೋಪುರ್ ಮಂಡಿ ಬಳಿಯ ದೆಹಲಿ ಜಲ ಮಂಡಳಿ ನೀರು ಸಂಸ್ಕರಣಾ ಘಟಕದಲ್ಲಿ ಭಾನುವಾರ ಮುಂಜಾನೆ ಮಗುವೊಂದು 40 ಅಡಿ ಆಳದ ಬೋರ್‌ವೆಲ್ ಪೈಪ್‌ಗೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್) ತಂಡಗಳ ನೇತೃತ್ವದಲ್ಲಿ ರಕ್ಷಣಾ ಕಾರ್ಯಗಳು ನಡೆಯುತ್ತಿವೆ.
ಪಶ್ಚಿಮ ದೆಹಲಿಯ ಕೇಶೋಪುರ್ ಮಂಡಿ ಪ್ರದೇಶದ ಡಿಜೆಬಿ ಪ್ಲಾಂಟ್‌ನಲ್ಲಿ ಮಗು ಬೋರ್ ವೆಲ್ ಗೆ ಬಿದ್ದ ಬಗ್ಗೆ ಬೆಳಗಿನ ಜಾವ 1 ಗಂಟೆಯ ಸುಮಾರಿಗೆ ವಿಕಾಸಪುರಿ ಪೊಲೀಸ್ ಠಾಣೆಗೆ ಮಾಹಿತಿ ಲಭಿಸಿದೆ. 40 ಅಡಿ ಆಳದ ಬೋರ್‌ವೆಲ್ ಪೈಪ್‌ನ ವ್ಯಾಸ 1.5 ಅಡಿ ಆಗಿದೆ.
ಬೋರ್‌ವೆಲ್‌ಗೆ ಬಿದ್ದವರು ಮಗುವೋ ಅಲ್ಲವೋ ಎಂಬುದು ದೃಢಪಟ್ಟಿಲ್ಲ. ರಾತ್ರಿ 1:15ಕ್ಕೆ ಪೊಲೀಸರಿಗೆ ಬಂದ ಕರೆ ಪ್ರಕಾರ, ಯಾರೋ ಕಳ್ಳತನ ಮಾಡಲು ತಮ್ಮ ಕಚೇರಿಗೆ ಬಂದು ಬೋರ್‌ವೆಲ್‌ಗೆ ಬಿದ್ದಿದ್ದಾರೆ ಎಂದು ಜಲ ಮಂಡಳಿಯ ನೌಕರರು ತಿಳಿಸಿದ್ದಾರೆ.
ಸ್ಥಳದಲ್ಲಿ ಎನ್‌ಡಿಆರ್‌ಎಫ್ ರಕ್ಷಣಾ ತಂಡವನ್ನು ಇನ್‌ಸ್ಪೆಕ್ಟರ್-ಇನ್-ಚಾರ್ಜ್ ವೀರ್ ಪ್ರತಾಪ್ ಸಿಂಗ್ ನೇತೃತ್ವ ವಹಿಸಿದ್ದಾರೆ. ಮಗು ಬಿದ್ದಿರುವ ಬೋರ್‌ವೆಲ್‌ಗೆ ಸಮಾನಾಂತರವಾಗಿ ಹೊಸ ಬೋರ್‌ವೆಲ್ ಕೊರೆಸುವ ಮೂಲಕ ತಂಡವು ಶೀಘ್ರದಲ್ಲೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ದೆಹಲಿ ಅಗ್ನಿಶಾಮಕ ಸೇವೆಯ ಪ್ರಕಾರ, ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.