alex Certify BIG NEWS: ಪತಿ ಮೇಲಿನ ಸಿಟ್ಟಿಗೆ ಮಕ್ಕಳಿಗೆ ಚಿತ್ರಹಿಂಸೆ ನೀಡಿದ ತಾಯಿ; ಸಿಗರೇಟ್ ನಿಂದ ಸುಟ್ಟು, ಫ್ರಿಡ್ಜ್ ನೀರು ಎರಚಿ ಹಲ್ಲೆ; FIR ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪತಿ ಮೇಲಿನ ಸಿಟ್ಟಿಗೆ ಮಕ್ಕಳಿಗೆ ಚಿತ್ರಹಿಂಸೆ ನೀಡಿದ ತಾಯಿ; ಸಿಗರೇಟ್ ನಿಂದ ಸುಟ್ಟು, ಫ್ರಿಡ್ಜ್ ನೀರು ಎರಚಿ ಹಲ್ಲೆ; FIR ದಾಖಲು

ಬೆಂಗಳೂರು: ಇತ್ತೀಚೆಗೆ ಮೂರು ವರ್ಷದ ಮಗುವಿನ ಮೇಲೆ ಹೆತ್ತ ತಾಯಿಯೇ ಮನಬಂದಂತೆ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಅಂತದ್ದೇ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೆತ್ತ ತಾಯಿಯೇ ತನ್ನ ಇಬ್ಬರು ಮಕ್ಕಳಿಗೆ ಚಿತ್ರಹಿಸೆ ನೀಡಿದ್ದಾಳೆ. ಪತಿ ಮೇಲಿನ ಸಿಟ್ಟಿಗೆ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾಳೆ. ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಮಕ್ಕಳನ್ನು ಹೊಡೆಯುವುದು, ಕಚ್ಚುವುದು, ಸಿಗರೇಟ್ ನಿಂದ ಸುಡುವುದು, ಫ್ರಿಡ್ಜ್ ನಲ್ಲಿದ್ದ ನೀರನ್ನು ತೆಗೆದು ಮಕ್ಕಳ ಮೇಲೆ ಎರಚುವುದು ಸೇರಿದಂತೆ ಮಕ್ಕಳಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾಳೆ.

ಮಕ್ಕಳು ನೀಡಿದ ದೂರಿನ ಮೇರೆಗೆ ತಾಯಿ ಆಯೇಷಾ ಹಾಗೂ ಆಕೆಯ ಬಾಯ್ ಫ್ರೆಂಡ್ ಸಲೀಂ ಜಬೀರ್ ವಿರುದ್ಧ ಜೆ.ಜೆ.ನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...