HomeLatest Newsʻಏಷ್ಯನ್ ಟೀಮ್ ಚಾಂಪಿಯನ್ʼ ಗಳಿಗೆ ನಗದು ಬಹುಮಾನ ಘೋಷಿಸಿದ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ‌

ʻಏಷ್ಯನ್ ಟೀಮ್ ಚಾಂಪಿಯನ್ʼ ಗಳಿಗೆ ನಗದು ಬಹುಮಾನ ಘೋಷಿಸಿದ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ‌

ನವದೆಹಲಿ : ಕಳೆದ ತಿಂಗಳು ಏಷ್ಯಾ ಟೀಮ್ ಚಾಂಪಿಯನ್ಶಿಪ್ನಲ್ಲಿ (ಬಿಎಟಿಸಿ) ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದ ಮಹಿಳಾ ಬ್ಯಾಡ್ಮಿಂಟನ್ ತಂಡಕ್ಕೆ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) 35 ಲಕ್ಷ ರೂ.ಗಳ ನಗದು ಬಹುಮಾನವನ್ನು ಘೋಷಿಸಿದೆ.

ಏಷ್ಯನ್ ಗೇಮ್ಸ್ ಪುರುಷರ ಡಬಲ್ಸ್ ಚಾಂಪಿಯನ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರಿಗೆ 12 ಲಕ್ಷ ರೂ.ಸೇರಿದಂತೆ ಒಟ್ಟು 1.12 ಕೋಟಿ ರೂ.ಗಳ ನಗದು ಬಹುಮಾನವನ್ನು ಬಿಎಐ ಘೋಷಿಸಿದೆ.

ಏಶ್ಯಡ್ನಲ್ಲಿ ಪುರುಷರ ಸಿಂಗಲ್ಸ್ನಲ್ಲಿ ಕಂಚಿನ ಪದಕ ಗೆದ್ದ ಎಚ್.ಎಸ್.ಪ್ರಣಯ್ ಅವರಿಗೆ 5 ಲಕ್ಷ ರೂ., ಹ್ಯಾಂಗ್ಝೌನಲ್ಲಿ ಬೆಳ್ಳಿ ಪದಕ ಗೆದ್ದ ಪುರುಷರ ತಂಡಕ್ಕೆ ಒಟ್ಟಾರೆ 40 ಲಕ್ಷ ರೂ. ಬಿಎಟಿಸಿಯಲ್ಲಿ ಮಹಿಳಾ ತಂಡ ಮತ್ತು ಏಷ್ಯಾಡ್ನಲ್ಲಿ ಪುರುಷರ ತಂಡದೊಂದಿಗೆ ಬರುವ ಸಹಾಯಕ ಸಿಬ್ಬಂದಿಗೆ 8.8 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಬಿಎಐ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2023ರ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ಆಯುಷ್ ಶೆಟ್ಟಿ (1 ಲಕ್ಷ ರೂ.), ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ 15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಚಾಂಪಿಯನ್ ಬೊರ್ನಿಲ್ ಆಕಾಶ್ ಚಾಂಗ್ಮೈ (2 ಲಕ್ಷ ರೂ.), 17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಬೆಳ್ಳಿ ಪದಕ ವಿಜೇತ ತನ್ವಿ ಶರ್ಮಾ (1 ಲಕ್ಷ ರೂ.) ಮತ್ತು 15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಕಂಚಿನ ಪದಕ ವಿಜೇತ ಜಗ್ಶೇರ್ ಸಿಂಗ್ ಖಂಗುರಾ (50,000 ರೂ.) ಅವರನ್ನು ಬಿಎಐ ಸನ್ಮಾನಿಸಿತು.

For Latest News Updates, Join Our Whatsapp Community🚩
RELATED ARTICLES

Most Popular