ತುಮಕೂರು: ಗೆಳೆಯನೊಂದಿಗೆ ಜಾತ್ರೆಗೆ ಬಂದ ವಿದ್ಯಾರ್ಥಿನಿ ಬ್ಲಾಕ್ ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಬಂಡೆಪಾಳ್ಯದಲ್ಲಿ ವಾಸವಾಗಿದ್ದ ಬಾಗಲಕೋಟೆ ಮೂಲಕ ಅಮೋಘ್(220, ಹನುಮಂತ(22), ಪ್ರತಾಪ್(20) ಬಂಧಿತ ಆರೋಪಿಗಳು. ಸೋಮವಾರ ಸ್ನೇಹಿತನೊಂದಿಗೆ ಸಿದ್ದಗಂಗಾ ಮಠದ ಕೆಲಸಕ್ಕೆ ಬಂದಿದ್ದ ಪಿಯುಸಿ ವಿದ್ಯಾರ್ಥಿನಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಕುಳಿತಿದ್ದಾಗ ಆರೋಪಿಗಳು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.
ಜಾಲತಾಣದಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಸಿ ಬಳಿಕ ಬಾಲಕಿಯನ್ನು ರೂಮ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ನಂತರ ಬಾಲಕಿಯನ್ನು ಮಠದ ಬಳಿ ಬಿಟ್ಟು ಹೋಗಿದ್ದಾರೆ. ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಆಕೆಯ ಹೇಳಿಕೆ ಆಧರಿಸಿ ಮಹಿಳಾ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.