HomeKarnatakaರಾಜ್ಯದ ಮುಂದಿನ ಸಿಎಂ ʻಬಿ.ವೈ.ವಿಜಯೇಂದ್ರʼ : ಪ್ರಣವಾನಂದ ಸ್ವಾಮೀಜಿ ಹೇಳಿಕೆ

ರಾಜ್ಯದ ಮುಂದಿನ ಸಿಎಂ ʻಬಿ.ವೈ.ವಿಜಯೇಂದ್ರʼ : ಪ್ರಣವಾನಂದ ಸ್ವಾಮೀಜಿ ಹೇಳಿಕೆ

ಶಿವಮೊಗ್ಗ : ರಾಜ್ಯದ ಭವಿಷ್ಯದ ಮುಖ್ಯಮಂತ್ರಿ ಬಿ.ವೈ. ವಿಜಯೇಂದ್ರ ಆಗಬೇಕು ಎಂದು ಪ್ರಣವಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಸಾಗರದಲ್ಲಿ ನಡೆದ ಶಕ್ತಿ ಸಾಗರ ಸಮಾವೇಶದಲ್ಲಿ ಮಾತನಾಡಿದ ಸ್ವಾಮೀಜಿಗಳು, ರಾಜ್ಯದ ಭವಿಷ್ಯದ ಮುಖ್ಯಮಂತ್ರಿ ವಿಜಯೇಂದ್ರ ಆಗಬೇಕು. ಇದು ಯಡಿಯೂರಪ್ಪ ಆಸೆ ಕೂಡ ಹೌದು, ಬಿ.ಎಸ್.‌ ಯಡಿಯೂರಪ್ಪನವರ ಋಣ ಸಮಾಜ ತೀರಿಸಬೇಕು ಎಂದರು.

ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಆಗುತ್ತಾರೆ. ಮಾಜಿ ಮುಖ್ಯಮಂತ್ರಿ ಮಕ್ಕಳು ಹೇಗೆ ಇರಬೇಕೆಂದು ಅವರನ್ನು ನೋಡಿ ಕಲಿಯಬೇಕು. ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಬಯಕೆಯಾಗಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular