ಭಾರತದ ಅತಿ ದೊಡ್ಡ ಸಿರಿವಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಎರಡನೇ ಪುತ್ರ ಅನಂತ್ ಅಂಬಾನಿಯವರ ವಿವಾಹ ಮಹೋತ್ಸವ ಗುಜರಾತಿನ ಜಾಮ್ ನಗರದಲ್ಲಿ ನಡೆಯುತ್ತಿದ್ದು, ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿ ಆರಂಭವಾಗಿದೆ.
ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಲ್ ಗೇಟ್ಸ್, ಮಾರ್ಕ್ ಜುಕರ್ ಬರ್ಗ್, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಮೀರ್ ಖಾನ್ ಸೇರಿದಂತೆ ದೇಶ – ವಿದೇಶಗಳ ಗಣ್ಯಾತಿಗಣ್ಯರು ಆಗಮಿಸಿದ್ದು, ಖ್ಯಾತ ಗಾಯಕಿ ರಿಯಾನಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಆಗಮಿಸಿದ ಗಣ್ಯರ ವಾಸ್ತವ್ಯಕ್ಕಾಗಿ ಜಾಮ್ ನಗರದಲ್ಲಿನ ಎಲ್ಲ ಐಷಾರಾಮಿ ಹೋಟೆಲ್ ಗಳನ್ನು ಬುಕ್ ಮಾಡಲಾಗಿದೆ.
ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಜೊತೆ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದು, ಜಾಮ್ ನಗರದಲ್ಲಿ ನಡೆದ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಅವರು ಆಡಿದ ಮಾತುಗಳನ್ನು ಕೇಳಿ ಮುಖೇಶ್ ಅಂಬಾನಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಆಗಮಿಸಿದ ಗಣ್ಯರ ಸಮ್ಮುಖದಲ್ಲಿ ಮಾತನಾಡಿದ ಅನಂತ್ ಅಂಬಾನಿ, ತಾವು ಬಾಲ್ಯದಲ್ಲಿ ಎದುರಿಸಿದ ಆರೋಗ್ಯ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದು, ಈ ಸಂದರ್ಭದಲ್ಲಿ ತಮ್ಮ ಕುಟುಂಬ ಸದಸ್ಯರು, ಸ್ನೇಹಿತರು ನೀಡಿದ ನೈತಿಕ ಬೆಂಬಲವನ್ನು ಸ್ಮರಿಸಿಕೊಂಡಿದ್ದಾರೆ. ಇದನ್ನು ಕೇಳಿ ಮುಖೇಶ್ ಅಂಬಾನಿ ಭಾವುಕರಾಗಿದ್ದಾರೆ.
https://twitter.com/CNBCTV18News/status/1763869296416178639?ref_src=twsrc%5Etfw%7Ctwcamp%5Etweetembed%7Ctwterm%5E1763869296416178639%7Ctwgr%5E5340fbf22cbf7807326e1f196168bd915553ab3f%7Ctwcon%5Es1_&ref_url=https%3A%2F%2Fwww.cnbctv18.com%2Ftravel%2Fculture%2Fwatch-video-mukesh-ambani-sheds-tears-of-joy-as-he-gets-emotional-during-son-anants-speech-during-pre-wedding-bash-19183391.htm