ಛತ್ತೀಸ್ ಗಢದ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ಶಾಲೆಯ ಒಳಗೆ ಮದ್ಯದ ಬಾಟಲಿಯನ್ನು ಇಟ್ಟುಕೊಂಡು ಪಾರ್ಟಿ ಮಾಡಿದ್ದು, ವಿಡಿಯೋ ವೈರಲ್ ಆಗಿದೆ.. ಶಿಕ್ಷಕನನ್ನು ಸಂತೋಷ್ ಕೇವತ್ ಎಂದು ಗುರುತಿಸಲಾಗಿದೆ. ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕೇವತ್ ಸ್ಟಾಫ್ ಗೆ ಬಂದು ಕುರ್ಚಿಯ ಮೇಲೆ ಕುಳಿತು ಮದ್ಯದ ಬಾಟಲಿಯನ್ನು ಮೇಜಿನ ಮೇಲೆ ಇಟ್ಟಿದ್ದಾರೆ. ನಂತರ ಲೋಟದಲ್ಲಿ ಮದ್ಯವನ್ನು ಸುರಿದಿದ್ದಾರೆ. ಅಲ್ಲದೇ ಕೆಲಸಕ್ಕೆ ತಡವಾಗಿ ಬಂದಿದ್ದೀರಿ ಎಂದು ಇತರ ಶಿಕ್ಷಕರು ಕೆವಾಟ್ ಗೆ ಹೇಳಿದ್ದಕ್ಕೆ ಇದು ನನ್ನ ಇಷ್ಟ ಎಂದು ಹೇಳಿದ್ದಾರೆ.
ಮಕ್ಕಳಿಗೆ ಬುದ್ದಿ ಹೇಳಬೇಕಾದ ಶಿಕ್ಷಕ ಶಾಲೆಯಲ್ಲೇ ಮದ್ಯ ಸೇವಿಸಿದ್ದು, ವಿಡಿಯೋ ವೈರಲ್ ಆಗಿ ನೆಟ್ಟಿಗರು ಕಿಡಿಕಾರಿದ್ದಾರೆ. “ಕೆಲಸದಿಂದ ತೆಗೆದುಹಾಕುವವರೆಗೂ “ಮರು ಪೋಸ್ಟ್” ಮಾಡುತ್ತಲೇ ಇರಿ. ಈ ಶಿಕ್ಷಕ ಶಾಲೆಯಲ್ಲಿ ಬಹಿರಂಗವಾಗಿ ಮದ್ಯಪಾನ ಮಾಡುವ ಮೂಲಕ ಮಕ್ಕಳ ಭವಿಷ್ಯದೊಂದಿಗೆ ಆಟವಾಡುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
बर्खास्त होने तक "Repost" करते रहना। 🔥
बच्चों के भविष्य से 'खिलवाड़' करता हुआ यह शिक्षक, खुलेआम स्कूल में शराब पी रहा है।
छत्तीसगढ़ के बिलासपुर में शिक्षक “संतोष केवट” का वीडियो वायरल। pic.twitter.com/axN9egCU1x
— Sudhir Mishra 🇮🇳 (@Sudhir_mish) February 29, 2024

