ಕೆಂಜ ಚೇತನ್ ಕುಮಾರ್ ನಿರ್ದೇಶನದ ‘ಚೌ ಚೌ ಬಾತ್’ ಚಿತ್ರದ ”ಇರಲಿ ಹೇಗೆ” ಎಂಬ ಮೆಲೋಡಿ ಹಾಡು ಇದೇ ಮಾರ್ಚ್ ಮೂರರಂದು ಬೆಳಿಗ್ಗೆ 11 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತಾಗಿ ಚಿತ್ರ ತಂಡ ಇಂದು ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ತಿಳಿಸಿದೆ.
ಈ ಚಿತ್ರವನ್ನು ಹಾರಿಜಾನ್ ಮೂವೀಸ್ ನಿರ್ಮಾಣ ಮಾಡಿದ್ದು, ಸಾಗರ್ ಗೌಡ ಸೇರಿದಂತೆ ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್, ಧನುಶ್ ಬೈಕಂಪಾಡಿ, ಅರುಣ ಬಾಲರಾಜ್, ಗೀತಾ ಬಂಗೇರ, ಪ್ರಕರ್ಷ ಶಾಸ್ತ್ರಿ ತಾರಾ ಬಳಗದಲ್ಲಿದ್ದಾರೆ. ಹೇಮಂತ್ ಜೋಯಿಸ್ ಸಂಗೀತ ಸಂಯೋಜನೆ ನೀಡಿದ್ದು, ನಿರ್ದೇಶಕ ಕೆಂಜ ಚೇತನ್ ಕುಮಾರ್ ಅವರ ಸಂಕಲನ, ಪ್ರಮೋದ್ ಮರವಂತೆ ಸಾಹಿತ್ಯ, ರುದ್ರಮುನಿ ಬಿಳಿಗೆರೆ ಛಾಯಾಗ್ರಹಣವಿದೆ.
Get ready to dive into the soulful melodies of 'Irali Hege' from the movie Chow Chow Bath 🍜✨ Releasing on A2 Music this 3rd! 🎬 #ChowChowBath #IraliHege #NewMusic #A2Music #KannadaSongs pic.twitter.com/ml60dWoNZG
— A2 Music (@A2MusicSouth) March 1, 2024

