ಬೆಂಗಳೂರು : ಬಿಬಿಎಂಪಿ ಇಂದು ಬಜೆಟ್ ಮಂಡಿಸಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿಗೆ ಹಲವು ಯೋಜನೆ, ಬೆಂಗಳೂರು ಅಭಿವೃದ್ದಿಗೆ ಅನುದಾನ ಘೋಷಿಸಿದೆ. ಹಾಗೂ 16 ಸಾವಿರ ಪೌರ ಕಾರ್ಮಿಕರ ನೇರ ನೇಮಕಾತಿಗೆ ಹಸಿರು ನಿಶಾನೆ ತೋರಿಸಲಾಗಿದೆ.
ಬಿಬಿಎಂಪಿ ಬರೋಬ್ಬರಿ 12,369 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದು, ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತ ಶಿವಾನಂದ ಕಲ್ಕೆರೆ ಮಂಡಿಸಿದ್ದಾರೆ. ಹೊಸ 3,673 ಹೊಸ ಪೌರ ಕಾರ್ಮಿಕ ಹುದ್ದೆ ಸ್ಥಾಪನೆಗೆ ಬಜೆಟ್ನಲ್ಲಿ ಅನುಮೋದನೆ ನೀಡಲಾಗಿದೆ. 16 ಸಾವಿರ ಪೌರ ಕಾರ್ಮಿಕರ ನೇರ ನೇಮಕಾತಿಗೆ ಹಸಿರು ನಿಶಾನೆ ತೋರಿಸಲಾಗಿದೆ.
ಪೌರಕಾರ್ಮಿಕರಿಗೆ ‘ಶರಣೆ ಸತ್ಯಕ್ಕ’ ಪ್ರಶಸ್ತಿ ನೀಡಲು ಹಾಗೂ ಪ್ರಶಸ್ತಿ ಜೊತೆಗೆ 50 ಸಾವಿರ ರೂ. ಬಹುಮಾನ ನೀಡುವ ಬಗ್ಗೆಯೂ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ವಿಶ್ವೇಶ್ವರಯ್ಯ ರೈಲ್ವೆಗೆ ಸಂಪರ್ಕ ಕಲ್ಪಿಸುವ ರೋಟರಿ ಫ್ಲೈ ಓವರ್ ನಿರ್ಮಾಣಕ್ಕೆ ಅನುಮೋದನೆ ನೀಡಿ 380 ಕೋಟಿ ಅನುದಾನ ಒದಗಿಸಲಾಗಿದೆ. ಬನಶಂಕರಿಯಲ್ಲಿ TOD ಸ್ಕೈ ವಾಕ್ ಗೆ 50 ಕೋಟಿ ನೀಡಲಾಗಿದೆ.