HomeEntertainmentBREAKING : ನಟಿ ʻದೀಪಿಕಾ ಪಡುಕೋಣೆʼ ಗರ್ಭಿಣಿ : ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ

BREAKING : ನಟಿ ʻದೀಪಿಕಾ ಪಡುಕೋಣೆʼ ಗರ್ಭಿಣಿ : ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿ

ಬಾಲಿವುಡ್ ನ ನೆಚ್ಚಿನ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಯಾದ ಆರು ವರ್ಷಗಳ ನಂತರ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಭಾನುವಾರ ಬೆಳಿಗ್ಗೆ, ನಟ ರಣವೀರ್‌ ಸಿಂಗ್‌ ಅವರು ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ದೀಪಿಕಾ ಪಡುಕೋಣೆ ಅವರು ಗರ್ಭೀಣಿಯಾಗಿರುವ ಕುರಿತು ಸುದ್ದಿಯನ್ನು ಘೋಷಿಸಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ.

ದೀಪಿಕಾ ಮತ್ತು ರಣವೀರ್ ನವೆಂಬರ್ 14, 2018 ರಂದು ಇಟಲಿಯ ಲೇಕ್ ಕೊಮೊ ಬಳಿ ಭವ್ಯ ಸಮಾರಂಭದಲ್ಲಿ ವಿವಾಹವಾದರು. 2013ರಲ್ಲಿ ತೆರೆಕಂಡ ‘ಗೋಲಿಯೋನ್ ಕಿ ರಾಸ್ಲೀಲಾ- ರಾಮ್ ಲೀಲಾ’ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರಲ್ಲೂ ಪ್ರೇಮಾಂಕುರವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular