HomeEntertainmentBIG NEWS: ಅಪಪ್ರಚಾರದ ಸುದ್ದಿ ಪ್ರಕಟಿಸದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದ ನಟ ಜಗ್ಗೇಶ್

BIG NEWS: ಅಪಪ್ರಚಾರದ ಸುದ್ದಿ ಪ್ರಕಟಿಸದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದ ನಟ ಜಗ್ಗೇಶ್

ಬೆಂಗಳೂರು: ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ತಮ್ಮ ವಿರುದ್ಧ ಅಪಪ್ರಚಾರದ ಸುದ್ದಿಗಳನ್ನು ಪ್ರಕಟಿಸದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲ ಮಾಧ್ಯಮಗಳಲ್ಲಿ ಜಗ್ಗೇಶ್ ಬಗ್ಗೆ ಅಪಪ್ರಚಾರದ ಸುದ್ದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಕೋರ್ಟ್ ಮೊರೆ ಹೋಗಿದ್ದಾರೆ.

ತಮ್ಮ ವಿರುದ್ಧ ಯಾವುದೇ ಅವಹೇಳನಕಾರಿ ಸುದ್ದಿ ಪ್ರಕಟ ಮಾಡದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ಸಿಟಿ ಸಿವಿಲ್ ಹಾಗೂ ಸೆಷನ್ ನ್ಯಾಯಾಲಯದ ಆದೇಶದ ಪ್ರಕಾರ ಜಗ್ಗೇಶ್ ವಿರುದ್ಧ ಪ್ರಾಮಾಣಿಕರಿಸದ ಸುದ್ದಿಗಳನ್ನು ಪ್ರಕಟಿಸುವಂತಿಲ್ಲ. ಮಾನಹಾನಿಯಾಗುವ ರೀತಿಯಲ್ಲಿ, ಅವಹೇಳನವಾಗುವ ರೀತಿಯಲ್ಲಿ ಯಾವುದೇ ಸುದ್ದಿ ಪ್ರಕಟಿಸುವಂತಿಲ್ಲ. ಇದು ತಾತ್ಕಾಲಿಕ ಆದೇಶವಾಗಿದ್ದು, ಏಪ್ರಿಲ್ 25ಕ್ಕೆ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಜಗ್ಗೇಶ್ ಪರ ವಕೀಲರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular