HomeKarnatakaBIG NEWS: ಪಾದ್ರಿಯಾಗಿರುವ ತಂದೆ ವಿರುದ್ಧವೇ ಮಗಳಿಂದ ಗಂಭೀರ ಆರೋಪ; 5-6 ಮಹಿಳೆಯರ ಮೇಲೆ ಲೈಂಗಿಕ...

BIG NEWS: ಪಾದ್ರಿಯಾಗಿರುವ ತಂದೆ ವಿರುದ್ಧವೇ ಮಗಳಿಂದ ಗಂಭೀರ ಆರೋಪ; 5-6 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ದೂರು

ದಾವಣಗೆರೆ: ಚರ್ಚ್ ಪಾದ್ರಿಯಾಗಿರುವ ತಂದೆಯ ವಿರುದ್ಧವೇ ಮಗಳು ಗಂಭೀರ ಆರೋಪ ಮಾಡಿದ್ದು, ಚರ್ಚ್ ಗೆ ಬರುವ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಜಯನಗರ ಚರ್ಚ್ ಪಾದ್ರಿಯಾಗಿರುವ ತನ್ನ ತಂದೆ ಪಿ.ರಾಜಶೇಖರ್ (58) ಚರ್ಚ್ ಗೆ ಬರುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಅಲ್ಲದೇ ನನಗಿಂತ ಚಿಕ್ಕ ವಯಸ್ಸಿನ ಯುವತಿ ಜೊತೆ ವಿವಾಹಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ಪಾದ್ರಿ ಮಗಳು ಡೈಸಿ ಪ್ರಿಯಾ ಆರೋಪಿಸಿದ್ದಾರೆ.

ಚರ್ಚ್ ಗೆ ಬರುವ ಆರೇಳು ಜನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಹಲವು ವರ್ಷಗಳಿಂದ ಈ ಕೃತ್ಯವೆಸಗುತ್ತಿದ್ದಾರೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾದ್ರಿ ವರ್ತನೆಯಿಂದ ನೊಂದ ಮಹಿಳೆಯರು ನನ್ನ ಬಳಿ ಸಂಕಟ ಹೇಳಿಕೊಂಡಿದ್ದಾರೆ. ಓರ್ವ ಶಿಕ್ಷಕಿಗೂ ನನ್ನ ತಂದೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪಾದ್ರಿ ವಿರುದ್ಧ ಮಗಳೇ ಗಂಭೀರ ಆರೋಪಗಳನ್ನು ಮಾಡಿದ್ದು, ಪಾದ್ರಿ ವಿರುದ್ಧ ದೂರು ನೀಡಲು ದಾವಣಗೆರೆ ಕ್ರಿಶ್ಚಿಯನ್ ಸಂಘಟನೆಗಳು ಮುಂದಾಗಿವೆ.

ಈ ಹಿಂದೆ ಪಾದ್ರಿ ರಾಜಶೇಖರ್ ವಿರುದ್ಧ ದಲಿತ ಮಹಿಳೆಗೆ ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿಕೊಂಡು ಮದುವೆಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.

For Latest News Updates, Join Our Whatsapp Community🚩
RELATED ARTICLES

Most Popular