HomeEntertainment24 ಕ್ಯಾರೆಟ್ ಚಿನ್ನದ ಕೇಕ್ ಕಟ್ ಮಾಡಿ ಟ್ರೋಲ್ ಆದ ನಟಿ 'ಊರ್ವಶಿ ರೌಟೆಲಾ'..!

24 ಕ್ಯಾರೆಟ್ ಚಿನ್ನದ ಕೇಕ್ ಕಟ್ ಮಾಡಿ ಟ್ರೋಲ್ ಆದ ನಟಿ ‘ಊರ್ವಶಿ ರೌಟೆಲಾ’..!

ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೆಲಾ ಫೆಬ್ರವರಿ 25 ರಂದು ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹುಟ್ಟುಹಬ್ಬದ ಆಚರಣೆಯ ಚಿತ್ರಗಳನ್ನು ನಟಿ ಹಂಚಿಕೊಂಡ ನಂತರ ನೆಟ್ಟಿಗರು ಭಾರಿ ಟ್ರೋಲ್ ಮಾಡಿದ್ದಾರೆ.

ಹೌದು, ನಟಿ ಊರ್ವಶಿ ರೌಟೆಲಾ ಉಡುಗೊರೆಯಾಗಿ ನೀಡಿದ 3 ಕೋಟಿ ಮೌಲ್ಯದ ಚಿನ್ನದ ಕೇಕ್ ಕತ್ತರಿಸುವ ಮೂಲಕ 30 ನೇ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತ್ ಡೇ ಇಷ್ಟೊಂದು ಬಿಲ್ಡಪ್ ಬೇಕಿತ್ತಾ..? ಅದು 3 ಕೋಟಿ ಮೌಲ್ಯದ ಚಿನ್ನದ ಕೇಕ್..? ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈಕೆ ಕೇಕ್ ಕತ್ತರಿಸುತ್ತಿರುವ ವಿಡಿಯೊ ಹಾಗೂ ಫೋಟೊಗಳನ್ನು ವೈರಲ್ ಆಗಿದೆ.

ರಾಪರ್ ಯೋ ಯೋ ಹನಿ ಸಿಂಗ್ ಅವರು ಉಡುಗೊರೆಯಾಗಿ ನೀಡಿದ 24 ಕ್ಯಾರೆಟ್ ಚಿನ್ನ ಲೇಪಿತ ಕೇಕ್ ಅನ್ನು ಕತ್ತರಿಸಿದ್ದಾರೆ. ಊರ್ವಶಿ ರೌಟೇಲಾ ನಟ ದರ್ಶನ್ ನಟನೆಯ ಐರಾವತಾ ಸಿನಿಮಾದಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular