ನವದೆಹಲಿ : ಕರ್ನಾಟಕದ 11 ರೈಲು ನಿಲ್ದಾಣಗಳು ಸೇರಿ ಹಲವು ರೈಲು ನಿಲ್ದಾಣಗಳ ಮೇಲ್ದರ್ಜೆಗೆ ಇಂದು ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕರ್ನಾಟಕದ 11 ನಿಲ್ದಾಣ ಒಳಗೊಂಡಂತೆ ಅಮೃತ ಭಾರತ ಯೋಜ ನೆಯಡಿ ದೇಶದ 553 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಸೋಮವಾರ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ರಾಜ್ಯದ ಕೆಂಗೇರಿ, ರಾಮನಗರ, ಚನ್ನಪಟ್ಟಣ, ಮಂಡ್ಯ, ಕೃಷ್ಣರಾಜಪುರಂ, ವೈಟ್ಫೀಲ್ಡ್, ಮಾಲೂರು, ಬಂಗಾರಪೇಟೆ, ಕುಪ್ಪಂ, ಮಲ್ಲೇಶ್ವರಂ, ತುಮಕೂರು ನಿಲ್ದಾಣ ಪುನ ರಾಭಿವೃದಿಗೆ ಆಯ್ಕೆಗೊಂಡಿವೆ.
ಕಳೆದ ವರ್ಷ ಎಂಟು ರೈಲ್ವೆ ನಿಲ್ದಾಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈಗ, ಚೆನ್ನೈ ಬೀಚ್ ಮತ್ತು ಗಿಂಡಿ ಸೇರಿದಂತೆ ಹಲವು ಕಡೆ ರೈಲ್ವೆ ನಿಲ್ದಾಣಗಳಲ್ಲಿ ಅಡಿಪಾಯ ಹಾಕಲಾಗುತ್ತಿದೆ. ಎಬಿಎಸ್ಎಸ್ ಯೋಜನೆಗೆ ಕ್ರೋಮ್ಪೆಟ್ ಮತ್ತು ತಿರುಸುಲಂ ಎಂಬ ಇನ್ನೂ ಎರಡು ರೈಲ್ವೆ ನಿಲ್ದಾಣಗಳನ್ನು ಸೇರಿಸಲಾಗಿದ್ದು, ಶೀಘ್ರದಲ್ಲೇ ಕೆಲಸ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.