HomeKarnatakaSHOCKING NEWS: ಪ್ರೀತಿಸಿ ಮದುವೆಯಾಗಿ ಕೈಕೊಟ್ಟ ಪತಿಯಿಂದ ಬೇರೊಂದು ಮದುವೆ; ಆತ್ಮಹತ್ಯೆಗೆ ಶರಣಾದ ಪತ್ನಿ

SHOCKING NEWS: ಪ್ರೀತಿಸಿ ಮದುವೆಯಾಗಿ ಕೈಕೊಟ್ಟ ಪತಿಯಿಂದ ಬೇರೊಂದು ಮದುವೆ; ಆತ್ಮಹತ್ಯೆಗೆ ಶರಣಾದ ಪತ್ನಿ

ಚಿತ್ರದುರ್ಗ: ಪ್ರೀತಿಸಿ ವಿವಾಹವಾಗಿದ್ದ ಪತಿ ಮಹಾಶಯ ಪತ್ನಿಗೆ ಕೈಕೊಟ್ಟು ಬೇರೊಂದು ಮದುವೆಯಾದ ವಿಷಯ ತಿಳಿದ ಪತ್ನಿ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆಯ ಕನಬೇವು ಗ್ರಾಮದಲ್ಲಿ ನಡೆದಿದೆ.

21 ವರ್ಷದ ವಿಶಾಲಾಕ್ಷಿ ನೇಣಿಗೆ ಶರಣಾದ ಮಹಿಳೆ. ಒಂದು ವರ್ಷದ ಹಿಂದಷ್ಟೇ ವಿಶಾಲಾಕ್ಷಿ ಹಾಗೂ ತಿಪ್ಪೇಸ್ವಾಮಿ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಅನ್ಯಜಾತಿಯವಳು ಎಂಬ ಕಾರಣಕ್ಕೆ ತಿಪ್ಪೇಸ್ವಾಮಿ ಮನೆಯವರು ಮದುವೆಗೆ ತೀವ್ರ ವಿರೋಧ ಮಾಡಿದ್ದರು.

ವಿದ್ಯಾಭ್ಯಾಸ ಮಾಡುತ್ತಿದ್ದ ವಿಶಾಲಕ್ಷಿಯನ್ನು ಬೆನ್ನು ಬಿದ್ದು ಪ್ರೀತಿಸಿ ವಿವಾಹವಾಗಿದ್ದ. ಆದರೆ ಈಗ ಮನೆಯವರ ಒತ್ತಡ ಎಂದು ವಿಶಾಲಾಕ್ಷಿಯನ್ನು ಬಿಟ್ಟು ಬೇರೊಂದು ಮದುವೆಯಾಗಿದ್ದಾನೆ. ಪತಿ ಬೇರೆ ಮದುವೆಯಾದ ವಿಷಯ ತಿಳಿದ ವಿಶಲಾಕ್ಷಿ ನೇಣಿಗೆ ಕೊರಳೊಡ್ಡಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular