HomeLive Newsನಾಳೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವಣ ಅಂತಿಮ ಟಿ 20 ಸಮರ

ನಾಳೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವಣ ಅಂತಿಮ ಟಿ 20 ಸಮರ

ಎಲ್ಲೆಲ್ಲೂ ಕ್ರಿಕೆಟ್ ಲೀಗ್ ಗಳು ಮತ್ತು ಟಿ ಟ್ವೆಂಟಿ ಸರಣಿಗಳು ನಡೆಯುತ್ತಿದ್ದು, ಟಿ20 ವಿಶ್ವಕಪ್ ಗೂ ಮುನ್ನ ಅಂತರಾಷ್ಟ್ರೀಯ ತಂಡಗಳಿಗೆ ಇದೊಂದು ಒಳ್ಳೆಯ ಅಭ್ಯಾಸವಾಗಲಿದೆ. ನಾಳೆ ಆಕ್ಲ್ಯಾಂಡ್ ನಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ನಡುವಣ ಅಂತಿಮ ಟಿ 20 ಪಂದ್ಯ ನಡೆಯುತ್ತಿದೆ.

ಎರಡು ಪಂದ್ಯಗಳಲ್ಲೂ ನ್ಯೂಜಿಲ್ಯಾಂಡ್ ಎದುರು ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿದ್ದು, ನಾಳೆ ಅಂತಿಮ ಟಿ 20 ಪಂದ್ಯದಲ್ಲಿ ಗೆದ್ದು ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ.

ಜಯದ ಹುಡುಕಾಟದಲ್ಲಿರುವ ನ್ಯೂಜಿಲೆಂಡ್ ತಂಡ ತನ್ನ ಹೋಂ ಗ್ರೌಂಡ್ ನಲ್ಲಿ ಈ ಪಂದ್ಯದಲ್ಲಿ ಜಯಭೇರಿಯಾಗುವ ಮೂಲಕ ಕ್ಲೀನ್ ಸ್ವೀಪ್ ಅವಮಾನದಿಂದ ಪಾರಾಗಲು ನೋಡುತ್ತಿದೆ. ಒಟ್ಟಾರೆ ಈ ಎರಡು ಬಲಿಷ್ಠ ತಂಡಗಳಿಂದ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಸಿಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular