ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ನಟಿ ಪ್ರಿಯಾಂಕಾ ಚೋಪ್ರಾ, ಬ್ಲಾಕ್ ಬಸ್ಟರ್ ಚಿತ್ರ ಡಾನ್ 2 ನಲ್ಲಿ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಕಿಂಗ್ ಖಾನ್ ಮತ್ತು ದೇಸಿ ಗರ್ಲ್ ಕೆಮೆಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಗಿತ್ತು. ತೆರೆ ಮೇಲೆ ಮಾತ್ರವಲ್ಲದೆ ತೆರೆ ಹಿಂದೆ ಕೂಡ ಇಬ್ಬರ ಮಧ್ಯೆ ಲವ್ ಸ್ಟೋರಿ ನಡೆಯುತ್ತಿದೆ ಅಂತಾ ಆ ಸಮಯದಲ್ಲಿ ಸುದ್ದಿಯಾಗಿತ್ತು. ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಡೇಟಿಂಗ್ ವದಂತಿ ಬಿ-ಟೌನ್‌ನ ಹಾಟ್ ಗಾಸಿಪ್ ಆಗಿತ್ತು. ಆದ್ರೆ ಆಗ ಶಾರುಕ್ ಮತ್ತೆ ಪ್ರಿಯಾಂಕ ಈ ಬಗ್ಗೆ ಮಾತನಾಡಿರಲಿಲ್ಲ. ಈಗ ಇಬ್ಬರ ಕಾಮನ್ ಫ್ರೆಂಡ್ ಹಾಗೂ ಖ್ಯಾತ ನಿರ್ಮಾಪಕ ವಿವೇಕ್ ವಾಸ್ವಾನಿ ಈ ಬಗ್ಗೆ ಮಾತನಾಡಿದ್ದಾರೆ.
ರಾಜು ಬನ್ ಗಯಾ ಜೆಂಟಲ್‌ಮ್ಯಾನ್ ಚಿತ್ರದ ಮೂಲಕ ಶಾರುಖ್ ಖಾನ್ ಅವರನ್ನು ಬಾಲಿವುಡ್‌ಗೆ ಪರಿಚಯಿಸಿದ ನಿರ್ಮಾಪಕ ವಿವೇಕ್ ವಾಸ್ವಾನಿ. ಅವರು ಶಾರುಕ್ ಗೆ ಹತ್ತಿರವಾಗಿದ್ದಾರೆ. ಶಾರುಕ್ ಹಾಗೂ ಪ್ರಿಯಾಂಕಾ ಡೇಟಿಂಗ್ ಬಗ್ಗೆ ಮಾತನಾಡಿದ ವಿವೇಕ್, ಶಾರುಕ್ ಖಾನ್ ಒನ್ ವುಮೆನ್ ಮೆನ್ ಎಂದಿದ್ದಾರೆ. ಗೌರಿ ಖಾನ್ ಬಿಟ್ಟರೆ ಶಾರುಕ್ ಮತ್ತ್ಯಾರ ಜೊತೆಯೂ ಸಂಬಂಧ ಬೆಳೆಸಿಲ್ಲ ಎಂದು ವಿವೇಕ್ ವಾಸ್ವಾನಿ ಹೇಳಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿದ ವಿವೇಕ್ ವಾಸ್ವಾನಿ, ಶಾರುಕ್ ಅಂತ ವ್ಯಕ್ತಿಯಲ್ಲ. ಇಬ್ಬರ ಮಧ್ಯೆ ಸ್ನೇಹವಿತ್ತೇ ವಿನಃ ಸಂಬಂಧವಿರಲಿಲ್ಲ. ಈ ವದಂತಿ ಎಲ್ಲಿಂದ ಹರಡಿತು ಎಂಬುದು ಗೊತ್ತಿಲ್ಲ ಎಂದು ವಿವೇಕ್ ಹೇಳಿದ್ದಾರೆ.