HomeKarnatakaಗೃಹಿಣಿ ಅನುಮನಾಸ್ಪದವಾಗಿ ಸಾವು; ಪತಿಯೇ ಕೊಲೆಗೈದಿರುವ ಶಂಕೆ; ಪೋಷಕರ ಆರೋಪ

ಗೃಹಿಣಿ ಅನುಮನಾಸ್ಪದವಾಗಿ ಸಾವು; ಪತಿಯೇ ಕೊಲೆಗೈದಿರುವ ಶಂಕೆ; ಪೋಷಕರ ಆರೋಪ

ಹಾಸನ: ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಪತಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸುರಭಿ (24) ಮೃತ ಮಹಿಳೆ. ಮೂರು ವರ್ಷಗಳ ಹಿಂದೆ ಸುರಭಿ ನಾಗಯ್ಯನಕೊಪ್ಪಲು ನಿವಾಸಿ ದರ್ಶನ್ ಎಂಬುವವರ ಜೊತೆ ವಿವಾಹವಾಗಿದ್ದರು.

ಎರಡು ವರ್ಷಗಳಿಂದ ಸುರಭಿಗೆ ಪತಿ ಕಿರುಕುಳ ನೀಡುತ್ತಿದ್ದ ಎಂದು ಸುರಭಿ ಪೋಷಕರು ಆರೋಪಿಸಿದ್ದಾರೆ. ಇದೀಗ ಸುರಭಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ನಿಮ್ಮ ಮಗಳು ಲೋ ಬಿಪಿಯಿಂದ ಸಾವನ್ನಪ್ಪಿದ್ದಾಗಿ ಪತಿ ದರ್ಶನ್ ಹಾಗೂ ಮನೆಯವರು ಹೇಳುತ್ತಿದ್ದಾರೆ. ಆದರೆ ಸುರಭಿಯದ್ದು ಸಹಜ ಸಾವನ್ನಲ್ಲ. ಪತಿಯೇ ಕೊಲೆ ಮಾಡಿ ನಾಟಕವಾಡುತ್ತಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular