ವೆನೆಜುವೆಲಾ: ಮಧ್ಯ ವೆನೆಜುವೆಲಾದಲ್ಲಿ ಅಕ್ರಮವಾಗಿ ನಿರ್ವಹಿಸುತ್ತಿದ್ದ ತೆರೆದ ಗುಂಡಿಯ ಚಿನ್ನದ ಗಣಿ ಕುಸಿದ ಪರಿಣಾಮ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈವರೆಗೆ 14 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಕನಿಷ್ಠ 11 ಜನರು ಗಾಯಗೊಂಡಿದ್ದಾರೆ, ನಾವು ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದೇವೆ ಎಂದು ಬೊಲಿವರ್ ರಾಜ್ಯ ಗವರ್ನರ್ ಏಂಜೆಲ್ ಮಾರ್ಕಾನೊ ಸ್ಥಳೀಯ ವರದಿಗಾರರಿಗೆ ತಿಳಿಸಿದ್ದಾರೆ.
ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಬಹುದು. ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಗಣಿಗಾರರ ಸಂಬಂಧಿಕರು ಗಣಿಗೆ ಹತ್ತಿರದ ಸಮುದಾಯವಾದ ಲಾ ಪರಾಗ್ವಾದಲ್ಲಿ ಜಮಾಯಿಸಿ, ಗಾಯಗೊಂಡವರನ್ನು ರಕ್ಷಿಸಲು ಮತ್ತು ಶವಗಳನ್ನು ಹೊರತೆಗೆಯಲು ದೂರದ ಸ್ಥಳಕ್ಕೆ ವಿಮಾನವನ್ನು ಕಳುಹಿಸುವಂತೆ ಸರ್ಕಾರವನ್ನು ಕೋರಿದರು.