ನವದೆಹಲಿ : ರಾಹುಲ್ ಗಾಂಧಿ ‘ಭಾರತ್ ಜೋಡೋ ನ್ಯಾಯ’ ಯಾತ್ರೆಗೆ ಬ್ರೇಕ್ ಬಿದ್ದಿದ್ದು, ಫೆ.26 ರಿಂದ ಮಾ.1 ರವರೆಗೆ ಅಲ್ಪ ವಿರಾಮ ತೆಗೆದುಕೊಳ್ಳಲಿದೆ.
ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎರಡು ವಿಶೇಷ ಉಪನ್ಯಾಸಗಳನ್ನು ನೀಡಲು ಮತ್ತು ನವದೆಹಲಿಯಲ್ಲಿ ಪ್ರಮುಖ ಸಭೆಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಭಾರತ್ ಜೋಡೋ ನ್ಯಾಯ್ ಯಾತ್ರೆ ಫೆಬ್ರವರಿ 26 ರಿಂದ ಮಾರ್ಚ್ 1 ರವರೆಗೆ ವಿರಾಮ ತೆಗೆದುಕೊಳ್ಳಲಿದ್ದು, ಮಾರ್ಚ್ 2 ರಿಂದ ಭಾರತ್ ಜೋಡೋ ನ್ಯಾಯ’ ಯಾತ್ರೆ ಮತ್ತೆ ಆರಂಭವಾಗಲಿದೆ ಎಂದು ಕಾಂಗ್ರೆಸ್ ಬುಧವಾರ ತಿಳಿಸಿದೆ.