HomeLive Newsಇಂದು ಟೇಬಲ್ ಟಾಪರ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಜೊತೆ ಮುಖಾಮುಖಿಯಾಗಲಿದೆ ಗುಜರಾತ್ ಜೈಂಟ್ಸ್

ಇಂದು ಟೇಬಲ್ ಟಾಪರ್ ಜೈಪುರ್ ಪಿಂಕ್ ಪ್ಯಾಂಥರ್ಸ್ ಜೊತೆ ಮುಖಾಮುಖಿಯಾಗಲಿದೆ ಗುಜರಾತ್ ಜೈಂಟ್ಸ್

ಕಳೆದ ಪ್ರೊ ಕಬಡ್ಡಿ ಲೀಗ್ನ ಚಾಂಪಿಯನ್ ಆಗಿದ್ದ ಜೈಪುರ್ ಪಿಂಕ್ ಪ್ಯಾಂಥರ್ಸ್ ಈ ಬಾರಿಯೂ ತನ್ನ ಭರ್ಜರಿ ಪ್ರದರ್ಶನದಿಂದ ಅಂಕಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲೇ ಉಳಿದುಕೊಂಡಿದೆ. ಇನ್ನೇನು ಎಲಿಮಿನೇಟರ್ ಪಂದ್ಯಗಳಿಗೆ ಏಳು ದಿನಗಳು ಉಳಿದಿದ್ದು, ಈಗಾಗಲೇ ಆರು ತಂಡಗಳ ಪ್ಲೇ ಆಫ್ ಸ್ಥಾನ ಭದ್ರವಾಗಿದೆ.

ಇಂದು ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಗುಜರಾತ್ ಜೈಂಟ್ಸ್ ಮುಖಮುಖಿಯಾಗಲಿವೆ. ಈ ಬಾರಿ ಪ್ರೊ ಕಬಡ್ಡಿ ಲೀಗ್ ನಲ್ಲಿ ಇದುವರೆಗೂ ಕೇವಲ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡದ  ಜೊತೆ ಇಂದು ಗುಜರಾತ್ ಜೈಂಟ್ಸ್ ಯಾವ ರೀತಿ ಪ್ರದರ್ಶನ ತೋರಲಿದೆ ಕಾದು ನೋಡಬೇಕಾಗಿದೆ.

ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ  ಕಳೆದ ಪ್ರೊ ಕಬಡ್ಡಿ ರನ್ನರ್ ಆಫ್ ಪುಣೇರಿ ಪಲ್ಟನ್ ತಂಡ ಹರಿಯಾಣ ಸ್ಟೀಲರ್ ಜೊತೆ ಕಾದಾಡಲು ಸಜ್ಜಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular