HomeKarnatakaBIG NEWS: ಕಾಡಾನೆ ದಾಳಿ: ಆಶಾ ಕಾರ್ಯಕರ್ತೆ ಸೇರಿ ಇಬ್ಬರು ಮಹಿಳೆಯರು ದುರ್ಮರಣ

BIG NEWS: ಕಾಡಾನೆ ದಾಳಿ: ಆಶಾ ಕಾರ್ಯಕರ್ತೆ ಸೇರಿ ಇಬ್ಬರು ಮಹಿಳೆಯರು ದುರ್ಮರಣ

ಬೆಂಗಳೂರು: ಕಾಡಾನೆ ದಳಿಗೆ ಆಶಾ ಕಾರ್ಯಕರ್ತೆ ಸೇರಿದಂತೆ ಇಬ್ಬರು ಮಹಿಳೆಯರು ಹಾಗೂ ಮೂರು ಹಸುಗಳು ಮೃತಪಟ್ಟಿರುವ ದಾರುಣ ಘಟನೆ ರಾಜ್ಯದ ಗಡಿ ಭಾಗದ ಆನೆಕಲ್ ಬಳಿಯ ಅಣ್ಣಿಯಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮಕ್ಕೆ ಲಗ್ಗೆಯಿಟ್ಟ ಕಾಡಾನೆಯೊಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು, ಮೂರು ಹಸುಗಳನ್ನು ಬಲಿ ಪಡೆದಿದೆ. ಅಣ್ಣಿಯಾಳ ಗ್ರಾಮದ ಆಶಾ ಕಾರ್ಯಕರ್ತೆ ವಸಂತ (37) ಹಾಗೂ ದಾಸರಪಲ್ಲಿ ನಿವಾಸಿ ಅಶ್ವತ್ಥಮ್ಮ (40) ಮೃತ ಮಹಿಳೆಯರು.

ಕಳೆದ ಮೂರ್ನಾಲ್ಕು ದಿನಗಳಿಂದ ಗುಮ್ಮಳಾಪುರ, ಅಣ್ಣಿಯಾಳು, ತಳಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಕಾಡಾನೆಗಳು ಬೀಡುಇ ಬಿಟ್ಟಿದ್ದು, ಅಣ್ಣಿಯಾಳು ಗ್ರಾಮಸ್ಥರು ಕಾಡಾನೆ ಓಡಿಸಲು ಮುಂದಾಗಿದ್ದಾರೆ. ಈ ವೇಳೆ ತೋಟಕ್ಕೆ ನುಗ್ಗಿದ ಕಾಡಾನೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ದಾಳಿ ನಡೆಸಿದೆ. ಅಲ್ಲದೇ ಮೂರು ಹಸುಗಳ ಮೇಲು ದಾಳಿ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಡಾನೆ ದಾಳಿಗೆ ಇಬ್ಬರು ಮಹಿಳೆಯರು, ಜಾನುವಾರಿಗಳು ಸಾವನ್ನಪ್ಪಿರುವ ಬೆನ್ನಲ್ಲೇ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಶಾಸಕ ರಾಮಚಂದ್ರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಅರಣ್ಯ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular